ಯಡ್ಯೂರಪ್ಪಗೆ ಕೊಕ್ ನೀಡಲು ಮುಂದಾದ 'ಅಮಿತ್ ಶಾ'..?

ರಾಜ್ಯದಲ್ಲಿ ನಡೆದ 5 ಉಪಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡದೇ ಇರುವ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಳ್ಳುತ್ತಿದ್ದು. ಈ ನಡುವೆ ರಾಷ್ಟ್ಟಾಧ್ಯಕ್ಷ ಅಮಿತ್ ಶಾ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ನೆನ್ನೆ ಮಧ್ಯರಾತ್ರಿ ಯವರೆಗೂ ಸುಮಾರು 25 ಕ್ಕೂ ಹೆಚ್ಚು RSS ಮುಖಂಡರೊಡನೆ ಗುಪ್ತ ಸಮಾಲೋಚನೆ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರು ಉಪಚುನಾವಣೆಯಲ್ಲಿ ಬಿಜೆಪಿಗೆ ಅದ ಸೋಲು ಮುಂದಿನ ಕಾರ್ಯಕ್ರಮದ ಬಗ್ಗೆ ಸಮಾಲೋಚನೆ ನಡೆಸಿದರೆ, ಮುಖ್ಯವಾಗಿ ರಾಮಮಂದಿರ ವಿಷಯ ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಲು ಯಾವಯಾವ ರೀತಿ ತಂತ್ರಗಳನ್ನು ಮಾಡಬೇಕು ಎಂಬ ಬಗ್ಗೆ ಮಾತುಕತೆ ನಡೆದಿದೆ ಎಂಬ ಮಾಹಿತಿ ದೊರೆತಿದೆ. ಶಬರಿಮಲೆ ಮತ್ತು ರಾಮಮಂದಿರ ವಿಷಯವನ್ನು ಹೇಗೆ ಬಳಸಿಕೊಳಬೇಕು ಎಂಬ ಬಗ್ಗೆ ಮಾತುಕತೆ ನಡೆದಿದೆ.
ಬಿ ಎಸ್ ಯಡ್ಯೂರಪ್ಪ ನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಸಬೇಕಾ ಅಥವಾ ನಿಮ್ಮ ಪ್ರಕಾರ ಬೇರೆ ಯಾರನಾದರೂ ರಾಜ್ಯಾಧ್ಯಕ್ಷರನಾಗಿ ಮಾಡಬಹುದಾ..? ಎಂಬ ಪ್ರಶ್ನೆಯನ್ನ ಕರಾವಳಿ ಭಾಗದ ಬಿಜೆಪಿ ಮುಖಂಡರಲ್ಲಿ ಅಭಿಪ್ರಾಯ ಕೇಳಿದ ಅಮಿತ್ ಶಾ.
Comments