ಬಿಗ್ ಬ್ರೇಕಿಂಗ್: ಸಚಿವ ಸಂಪುಟದ ಸುಳಿವು ಬಿಟ್ಟುಕೊಟ್ಟ ಮಧುಬಂಗಾರಪ್ಪ..!

ಮಧು ಬಂಗಾರಪ್ಪ ಅವರನ್ನ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮಾತುಗಳು ಜೆಡಿಎಸ್ ವಲಯದಿಂದ ಈಗಾಗಲೇ ಕೇಳಿಬಂದಿದ್ದವು. ಇದೀಗ ಮತ್ತೊಮ್ಮೆ ಮಧುಬಂಗಾರಪ್ಪ ಹೇಳಿಕೆ ಇದಕ್ಕೆ ಪುಷ್ಠಿ ನೀಡುವಂತಿದೆ.
ಇನ್ನು ಬೈಎಲೆಕ್ಷನ್ ಸೋಲಿನ ಬಗ್ಗೆ ಮಾತನಾಡಿದ ಅವರು, ನಾನು ಸೋಲಿಗೆ ಹೆದರಿಲ್ಲ. ಬಿಜೆಪಿ ಸೇರಿ ಎಲ್ಲ ಪಕ್ಷದವರು ನನಗೆ ಮತ ಹಾಕಿದ್ದಾರೆ ಗೆಲ್ಲುವ ವಿಶ್ವಾಸವಿತ್ತು. ನಮ್ಮ ಪಕ್ಷದಲ್ಲಿ ಉತ್ತಮ ಸ್ಥಾನಮಾನದ ಬಗ್ಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ ಎಂದು ಮಧುಬಂಗಾರಪ್ಪ ತಮ್ಮ ಕಾರ್ಯಕರ್ತರಿಗೆ ಸುಳಿವನ್ನು ನೀಡಿದ್ದಾರೆ. ಆದರೆ ಏನು ಅದು ಸಿಹಿ ಸುದ್ದಿ ಅನ್ನೋದನ್ನ ಮಾತ್ರ ಬಹಿರಂಗಪಡಿಸಿಲ್ಲ. ಇದರಿಂದ ಕಾರ್ಯಕರ್ತರಲ್ಲಿ ಭಾರಿ ಕುತೂಹಲ ಮೂಡಿಸಿದೆ.
Comments