ಜೆಡಿಎಸ್’ನ ಶಾಸಕನಿಗೆ ಜೀವ ಬೆದರಿಕೆ ಕರೆ..!? ಕರೆಯಲ್ಲಿ ಹೇಳಿದ್ದೇನು ಗೊತ್ತಾ..!?
ಇತ್ತಿಚಿಗೆ ಉಪ ಚುನಾವಣೆಯ ಫಲಿತಾಂಶ ಬಂದ ಮೇಲೆ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಸಾಧಿಸುವಿವುದರಲ್ಲಿ ಯಶಸ್ವಿಯಾಗಿದೆ. ಆದರೆ ಈ ಹಿನ್ನಲೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ರಾಜಣ್ಣ ಅವರಿಗೆ ಮತ ನೀಡಿದ ಮತದಾರನೇ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎನ್ನಲಾಗುತ್ತಿದೆ..
ಜೆಡಿಎಸ್ ನ ಮಾಜಿ ಶಾಸಕ ರಾಜಣ್ಣ ಅವರಿಗೆ ನವೆಂಬರ್ 2 ಹಾಗೂ 3 ರಂದು ಕರೆ ಮಾಡಿರುವ ಆ ವ್ಯಕ್ತಿ ತನ್ನ ಹೆಸರಾಗಲಿ, ಅಥವಾ ಊರಾಗಲಿ ಹೇಳದೆ ತಾನು ನಿನಗೆ ಮತ ನೀಡಿದ ಮತದಾರ ಎಂದು ಹೇಳಿ ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ಏಕವಚನದಲ್ಲಿ ನಿಂದನೆ ಮಾಡಿದ್ದಾನೆ ಎಂದು ಹೇಳಿದ್ದಾರೆ.. ಕಾಂಗ್ರೆಸ್ ಪಕ್ಷದವರಿಂದ ಹಣ ತಿಂದು ಜೆಡಿಎಸ್ ಪಕ್ಷವನ್ನ ಹಾಳು ಮಾಡಿಬಿಟ್ಟೆ ಎಂದು ಕಿಡಿಕಾರಿದ್ದಾನೆ. ಅಲ್ಲದೇ ಏನಾದರೂ ಪೊಲೀಸರಿಗೆ ದೂರು ನೀಡಿದರೆ ಹಾಡಹಗಲೇ ನಿನ್ನ ಮನೆಗೆ ಬಂದು ತಲೆ ಕಡಿಯುತ್ತೇನೆ ಎಂದು ಜೀವ ಬೆದರಿಕೆ ಕೂಡ ಹಾಕಿದ್ದಾನೆ. ಎನ್ನಲಾಗುತ್ತಿದೆ. ಹೆಚ್ಚೆಂದರೆ ನೀನು ನನ್ನನ್ನು ಜೈಲಿಗೆ ಕಳುಹಿಸುತ್ತೀಯಾ ಅಷ್ಟೆ ತಾನೇ ಎಂದು ತಿಳಿಸಿದ್ದಾನೆ. ಈ ಹಿನ್ನಲೆಯಲ್ಲಿ ರಾಜಣ್ಣ ಎಸ್ಪಿ ಕಾರ್ತಿಕ್ ರೆಡ್ಡಿ ಅವರನ್ನು ಭೇಟಿ ಮಾಡಿ ಅನಾಮಧೇಯ ಮೊಬೈಲ್ ಕರೆಯ ಆಡಿಯೋ ರೆಕಾರ್ಡ್ ನೀಡಿ, ಆತನ ವಿರುದ್ಧ ದೂರು ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Comments