ಮಾಜಿ ಸಚಿವ ಜನಾರ್ದನ ರೆಡ್ಡಿ ನಾಪತ್ತೆ..!? ಕಾರಣವೇನು..?
ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಪ್ರಕರಣವೊಂದಕ್ಕೆ ಸಂಬಂಧ ಪಟ್ಟಂತೆ ತಮ್ಮನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯಬಹುದೆಂದು ಊಹಿಸಿ ಆ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವುದೋ ಡೀಲ್ ಒಂದರಲ್ಲಿ ಜನಾರ್ದನ ರೆಡ್ಡಿ ಪಾಲ್ಗೊಂಡಿದ್ದಾರೆಂಬ ಸುಳಿವು ಪಡೆದಿರುವ ಪೊಲೀಸರು, ವಿಚಾರಣೆಗಾಗಿ ಜನಾರ್ದನ ರೆಡ್ಡಿಯವರನ್ನು ಹುಡುಕುತ್ತಿದ್ದಾರೆಂದು ಎಂದು ಹೇಳಲಾಗುತ್ತಿದೆ.
ಜನಾರ್ಧನ ರೆಡ್ಡಿ ಆಪ್ತನ ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಈ ಮಾಹಿತಿ ದೊರಕಿದ್ದು, ಹೀಗಾಗಿ ಜನಾರ್ದನ ರೆಡ್ಡಿ ಅವರ ಪಾರಿಜಾತ ನಿವಾಸ ಸೇರಿದಂತೆ ಹಲವು ಕಡೆ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಂಬಂಧದ ಮಾಹಿತಿಯನ್ನು ಮೊದಲೇ ಪಡೆದಿದ್ದ ಜನಾರ್ದನ ರೆಡ್ಡಿಯವರು, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ಅವರ ಸಹೋದರಿ ಜೆ. ಶಾಂತಾ ಅವರು ಸೋತ ನಂತರ ಜನಾರ್ದನ ರೆಡ್ಡಿ ಸುದ್ದಿಗಾರರಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.
Comments