ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ: ಅಷ್ಟಕ್ಕೂ ರೆಬಲ್ ಸ್ಟಾರ್ ಹೇಳಿದ್ದೇನು..?
ಈಗಾಗಲೇ ರಾಜ್ಯದಲ್ಲಿ ಉಪ ಚುನಾವಣೆಯ ಸಮರ ಕೊನೆಯ ಹಂತ ತಲುಪಿದ್ದು ಜಿಲ್ಲೆಯ ಲೋಕಸಭಾ ಉಪ-ಚುನಾವಣೆಯ ಫಲಿತಾಂಶದಲ್ಲಿ ಮತ್ತೊಮ್ಮೆ ಮಾಜಿ ಸಂಸದ ಮತ್ತು ಹಿರಿಯ ನಟ ಅಂಬರೀಶ್ ಅವರ ಭವಿಷ್ಯ ನಿಜವಾಗಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಲೋಕಸಭಾ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅಖಾಡಕ್ಕೆ ಇಳಿದ್ದಿದ್ದರು... ಇಂದಿನ ಫಲಿತಾಂಶದಲ್ಲಿ ಶಿವರಾಮೇಗೌಡ ದಾಖಲೆ ಬರೆಯುತ್ತಾರೆ ಎಂದು ಅಂಬರೀಶ್ ಮತದಾನದ ಸಮಯದಲ್ಲಿ ಹೇಳಿದ್ದಾರಂತೆ. ಹೀಗಾಗಿ ಅಂದು ಅಂಬಿ ನುಡಿದಿದ್ದ ಭವಿಷ್ಯ ಇಂದಿನ ಉಪಚುನಾವಣೆಯ ಫಲಿತಾಂಶದ ಮೂಲಕ ನಿಜವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಅವರು ಒಂಬತ್ತು ಸುತ್ತುಗಳಲ್ಲೇ 1,80,000 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಪಡೆದುಕೊಂಡಿದ್ದು, ಭಾರಿ ಅಂತರದಿಂದ ಗೆಲ್ಲುವ ಸಾಧಿಸುವ ಮುನ್ಸೂಚನೆ ಇದೆ. ಸದ್ಯಕ್ಕೆ ಶಿವರಾಮೇಗೌಡ 3,94,807 ಮತಗಳನ್ನು ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ 1,61,135 ಮತ ಪಡೆದಿದ್ದಾರೆ. ಇದರಿಂದ ಶಿವರಾಮೇಗೌಡ ಸುಮಾರು 2,33,672 ಮತಗಳ ಅಂತರದಲ್ಲಿ ಮೂಂಚೂಣಿಯಲ್ಲಿದ್ದಾರೆ. ಈ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ದಾಖಲೆ ಹಿಂದಿಕ್ಕಿದ್ದಾರೆ ಎನ್ನಲಾಗುತ್ತಿದೆ.
Comments