ಸಿ ಎಂ, ಡಿ ಕೆ ಬ್ರದರ್ಸ್ ಹೊಡೆತಕ್ಕೆ ನಲುಗಿದ ಯೋಗೇಶ್ವರ್..?

ರಾಮನಗರ ಜಿಲ್ಲಾ ಬಿಜೆಪಿ ಮುಖಂಡರ ನಡುವೆ ಈಗ ಗೊಂದಲ ಉಂಟಾಗಿದ್ದು ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ವಿರುದ್ಧ ಬಿಜೆಪಿ ಮುಖಂಡರು ಬೇಸರ ವ್ಯಕ್ತ ಪಡಿಸುತ್ತಿದರೆ.
ಸಿ ಎಂ. ಲಿಂಗಪ್ಪ ಪುತ್ರ ಚಂದ್ರಶೇಖರ್ ರನ್ನು ಪಕ್ಷಕ್ಕೆ ಕರೆತಂದಿದ್ದೇ ಯಡವಟ್ಟಾಯ್ತಾ.! ಸಿ ಪಿ ಯೋಗೇಶ್ವರ್ ರವರು ಹೈ ಕಮಾಂಡ್ ಮಟ್ಟದಲ್ಲೂ ಹೆಸರು ಕೆಡಿಸಿಕೊಂಡಿದೆ. ಚಂದ್ರಶೇಖರ್ ರವರು ಮಾಡಿದ ಪಕ್ಷ ದ್ರೋಹಕ್ಕೆ ಸಿ ಪಿ ಯೋಗೇಶ್ವರ್ ರವರ ಇಮೇಜ್ ದೊಡ್ಡ ಮಠದಲ್ಲಿ ಇಮೇಜ್ ಡ್ಯಾಮೇಜ್ ಆಗಿದಿಯ ಎಂಬ ಪ್ರಶ್ನೆ ಕಾಡತೊಡಗಿದೆ. ಯೋಗೇಶ್ವರ್ ರವರು ಚಂದ್ರಶೇಖರ್ ರವರನ್ನು ಪಕ್ಷಕ್ಕೆ ಕರೆತಂದು ಅವರಿಗೆ ಟಿಕೆಟ್ ಕೊಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಯೋಗೇಶ್ವರ್ ರವರು ಯಾರ ಕರೆಗೂ ಸಿಗುತ್ತಿಲ್ಲ ಮತ್ತು ಸ್ವ ಕ್ಷೇತ್ರಕ್ಕೆ ಬರದೇ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದರೆ. ಬಿಜೆಪಿ ರಾಮನಗರದಲ್ಲಿ ನೆಲೆಕಂಡುಕೊಳ್ಲಲು ಸಾಕಷ್ಟು ಕಸರತ್ತುಗಳನ್ನು ಮಾಡುತಿತ್ತು ಆದರೆ ಈಗ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ರವರಿಂದ ಬಿಜೆಪಿ ಗೆ ತೀವ್ರ ಮುಖಭಂಗವಾಗಿದೆ. ಬಿಜೆಪಿಯ ಸ್ಥಳೀಯ ಮುಖಂಡರಿಗೆ ಟಿಕೆಟ್ ಕೊಟ್ಟಿದಾರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಇದಕೆಲ್ಲ ಸಿ ಪಿ ಯೋಗೇಶ್ವರ ಕಾರಣ ಎಂದು ಸ್ಥಳೀಯ ಮುಖಂಡರು ತಮ್ಮ ಆಕ್ರೋಶವನ್ನು ಹೊರಹಾಕಿದರೆ.
Comments