'ಕೈ' ಗೆ ಗುಡ್‌ಬೈ ಹೇಳಿ ತೆನೆ ಹೊರಲು ಸಿದ್ದರಾದ್ರ ಅಂಬರೀಶ್..!? ನವೆಂಬರ್ 11ರಂದು ಸೀಕ್ರೆಟ್ ರಿವಿಲ್ ಮಾಡ್ತಾರಂತೆ ರೆಬಲ್ ಸ್ಟಾರ್..!!
ಮಂಡ್ಯ ಲೋಕಸಭಾ ಉಪಚುನಾವಣೆಯ ಮತದಾನದ ನಂತರ ನಟ ಅಂಬರೀಶ್ , ಈ ಚುನಾವಣೆಯಲ್ಲಿ ಯಾವುದೇ ರೀತಿಯ ಉತ್ಸಾಹವೇ ಇಲ್ಲ. ನಮ್ಮ ತಮ್ಮಣ್ಣ ಅವರ ಊರು ಅಂತ ಇಲ್ಲಿ ಉತ್ಸಾಹ ಇದೆ ಅಷ್ಟೆ.. 11 ನೇ ತಾರೀಖು ಬನ್ನಿ ಎಲ್ಲ ಹೇಳ್ತಿನಿ ಎಂದು ಅಂಬರೀಶ್ ತಿಳಿಸಿದ್ದಾರೆ.
ಐದಕ್ಕೆ ಐದು ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲಲಿದೆ. ಈಗ ಚುನಾವಣೆ ಆಗುತ್ತಿರುವುದು ಸರಿ ಇಲ್ಲ. ಮೂರು ತಿಂಗಳಿಗಾಗಿ ಚುನಾವಣೆ ನಡೆಯುತ್ತಿದೆ. ನಂತರ ಮತ್ತೇ ಚುನಾವಣೆ ಬರಲಿದ್ದು, ಈ ಚುನಾವಣೆ ಸರಿ ಇಲ್ಲ ಎಂದಿದ್ದಾರೆ. ನವೆಂಬರ್ 11 ರ ನಂತರ ಸೀಕ್ರೆಟ್ ಹೇಳುತ್ತೇನೆ ಎಂದಿರುವ ಅಂಬರೀಶ್ ಹೇಳಿಕೆ ಬಗ್ಗೆ ಕುತೂಹಲ ಹೆಚ್ಚಿದೆ. ರಾಜ್ಯ ರಾಜಕಾರಣದಲ್ಲಿ ಅಂಬರೀಷ್ ಹೇಳಿಕೆ ಹೆಚ್ಚಿನ ಮಹತ್ವ ಪಡೆದಿದೆ.
Comments