ರಾಮನಗರದಲ್ಲಿ ಬಿಜೆಪಿಗೆ ಮತ್ತೊಂದು ಬಿಗ್ 'ಶಾಕ್': ಹಾಗಾದ್ರೆ ಜೆಡಿಎಸ್ ನ ಮುಂದಿನ ನಡೆಯೇನು..?
ರಾಮನಗರ ಮತದಾನಕ್ಕೆ ಇನ್ನೂ ಎರಡು ದಿನವಿರುವಾಗಲೇ ಅಖಾಡದಿಂದ ನಿವೃತ್ತರಾಗುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಚಂದ್ರಶೇಖರ್, ಈಗ ಬಿಜೆಪಿ ಪಕ್ಷಕ್ಕೆ ಮತ್ತೊಂದು ಹೊಡೆತ ನೀಡಿದ್ದಾರೆ. ತಾವು ಚುನಾವಣಾ ಕಣದಿಂದ ನಿವೃತ್ತರಾಗಿದ್ದು ಕಾಂಗ್ರೆಸ್ ಪಕ್ಷ ಸೇರಿರುವುದಾಗಿ ಹೇಳಿಕೊಂಡಿದ್ದ ಚಂದ್ರಶೇಖರ್, ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರನ್ನು ಬೆಂಬಲಿಸುವುದಾಗಿ ತಿಳಿಸಿದ್ದರು..
ನಂತರ ರಾಮನಗರ ಕ್ಷೇತ್ರದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ಚಂದ್ರಶೇಖರ್ ಕಣದಲ್ಲಿರದಿದ್ದರೂ ಕಮಲದ ಗುರುತಿಗೆ ಮತ ಯಾಚಿಸುವುದಾಗಿ ಹೇಳಿಕೊಂಡಿದ್ದರು. ಮತದಾನ ನಡೆಯುತ್ತಿರುವ ದಿನವಾದ ಇಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಬಿಜೆಪಿಗೆ ಮತ್ತೊಂದು ಹೊಡೆತ ನೀಡಿದ್ದಾರೆ. ಚುನಾವಣಾ ಏಜೆಂಟರಾಗಿ ಕಾರ್ಯ ನಿರ್ವಹಿಸಲು ಬಿಜೆಪಿ ಕಾರ್ಯಕರ್ತರಿಗೆ ನೀಡಿದ ಮಾನ್ಯತೆಯನ್ನು ಹಿಂಪಡೆದುಕೊಂಡಿರುವ ಕಾರಣ ರಾಮನಗರ ಕ್ಷೇತ್ರದ 277 ಬೂತ್ ಗಳಲ್ಲಿ ಬಿಜೆಪಿ ಏಜೆಂಟರೇ ಇಲ್ಲದಂತಾಗಿದೆ. ಒಟ್ಟಾರೆ ಈ ಬಾರಿ ಅನಿತಾಕುಮಾರಸ್ವಾಮಿಯವರ ಗೆಲುವು ಪಕ್ಕಾ ಎಂದು ಇದರಿಂದಲೇ ತಿಳಿಯುತ್ತದೆ.
Comments