ಲಕ್ಷ್ಮಿ ಹೆಬ್ಬಾಳ್ಕರ್ ಗೆ ಬಿಗ್ ಶಾಕ್ : ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸ್ಥಾನದಿಂದ ಔಟ್

02 Nov 2018 5:06 PM | Politics
439 Report

ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್  ತೆಗೆಯಲಾಗಿದೆ.., ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸ್ಥಾನಕ್ಕೆ ನೂತನವಾಗಿ ಪುಷ್ಟ ಅಮರನಾಥ್ ಅವರನ್ನು ನೇಮಕ ಮಾಡಲಾಗಿದೆ..ರಾಜ್ಯ ಮಹಿಳಾ ಘಟಕದ ಹಾಲಿ ಅಧ್ಯಕ್ಷೆಯಾದ ಲಕ್ಷ್ಮೀ ಹೆಬ್ಟಾಳ್ಕರ್‌ ಅವರನ್ನೇ ಲೋಕಸಭೆ ಚುನಾವಣೆ ಮುಗಿಯುವವರೆಗೂ ಮುಂದುವರಿಸುವಂತೆ ಹೈಕಮಾಂಡ್‌ ಮೇಲೆ ಕೆಲವು ನಾಯಕರು ಒತ್ತಡ ಹೇರಿದ್ದರು,.

ಆದರೆ ಆ ಪ್ರಯತ್ನಗಳೆಲ್ಲಾ ವಿಫಲವಾದ ಕಾರಣ ಶನಿವಾರ ರಾಹುಲ್‌ ಗಾಂಧಿ ಐವರು ಮಹಿಳಾ ನಾಯಕಿಯರನ್ನು ಸಂದರ್ಶನ ಮಾಡಿದ್ದರು, ಇದರಲ್ಲಿ ಮೈಸೂರು ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಕೆಪಿಸಿಸಿ ಕಾರ್ಯದರ್ಶಿಗಳಾದ ಡಾ. ನಾಗಲಕ್ಷ್ಮೀ ಚೌಧರಿ, ಶಾರದಾ ಗೌಡ, ಭಾರತಿ ಶಂಕರ್‌, ಮಂಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೆರ್ಲೆಟ್‌ ಪಿಂಟೋ ಭಾಗವಹಿಸಿದ್ದರು. ಕೊನೆಯದಾಗಿ ಮೈಸೂರು ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರಿಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

Edited By

Manjula M

Reported By

Manjula M

Comments