ಬ್ರೇಕಿಂಗ್ ನ್ಯೂಸ್:ರಾಮನಗರ ಉಪಚುನಾವಣೆ ಮುಂದೂಡಿಕೆ..!?
ರಾಮನಗರದ ಉಪಚುನಾವಣೆಯ ಮತದಾನಕ್ಕೆ 2 ದಿನವಿರುವಾಗಲೇ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹಿಂದೆ ಸರಿದು ಕೈ ಪಕ್ಷಕ್ಕೆ ಸೇರಿಕೊಂಡಿದ್ದಾರೆ.. ಆದ ಕಾರಣ ಕೂಡಲೇ ಮತದಾನ ಸ್ಥಗಿತಗೊಳಿಸಿ ಅಭ್ಯರ್ಥಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಚಿ.ನಾ.ರಾಮು ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರದಲ್ಲಿ ನಮ್ಮ ಅಭ್ಯರ್ಥಿ ನಿವೃತ್ತಿ ಘೋಷಿಸಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಹಾಗಾಗಿ ನಮ್ಮ ಅಭ್ಯರ್ಥಿ ಸತ್ತಿದ್ದಾರೆ ಎಂದು ನಾವೆಲ್ಲ ಭಾವಿಸಿದ್ದೇವೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಹಾಗಾಗಿ ಚುನಾವಣೆ ಅಸಿಂಧುಗೊಳಿಸಬೇಕು, ಮತದಾನ ಮುಂದೂಡಬೇಕು. ಇಲ್ಲವೇ ಫಲಿತಾಂಶ ತಡೆಹಿಡಿಯಬೇಕು.ಇಲ್ಲದೇ ಇದ್ದಲ್ಲಿ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದ್ದಾರೆ.
Comments