ರಮ್ಯ@420: ರಮ್ಯಗೆ ಸಿಕ್ಕಿತ್ತು ಮತ್ತೆ ಅದೇ ಸಂಖ್ಯೆ..!
ಮಾಜಿ ಸಂಸದೆ ರಮ್ಯಾಗೆ ಮತದಾರರ ಪಟ್ಟಿಯಲ್ಲಿ ಮತ್ತೆ 420 ಸಂಖ್ಯೆ ಸಿಕ್ಕಿದೆ. ವಿಧಾನ ಸಭಾ ಚುನಾವಣೆಯಲ್ಲಿ ರಮ್ಯಾಗೆ 420 ಸಂಖ್ಯೆಯೇ ಸಿಕ್ಕಿತ್ತು.. ಮತದಾರರ ಪಟ್ಟಿಯಲ್ಲಿ ರಮ್ಯಾ ಹೆಸರು ದಿವ್ಯಸ್ಪಂದನವಾಗಿದೆ.. ನಗರಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ರಮ್ಯಾ ಸಂಖ್ಯೆ 671ಕ್ಕೆ ಬದಲಾಗಿತ್ತು. ಇದೀಗ ಮತ್ತೆ 420 ಸಂಖ್ಯೆಯೆ ಸಿಕ್ಕಿದೆ.
ನಾಳೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಸದ್ಯ ರಮ್ಯಾ ನಾಳೆ ನಡೆಯುವ ಚುನಾವಣೆಯಲಾದರೂ ಮತದಾನ ಮಾಡುತ್ತಾರಾ ಎಂಬ ಚರ್ಚೆ ಮಂಡ್ಯ ಜನತೆಯಲ್ಲಿ ಮತ್ತೆ ಪ್ರಾರಂಭವಾಗಿದೆ. ಈ ಹಿಂದೆ ರಮ್ಯಾ ವಿಧಾನಸಭೆ ಹಾಗೂ ನಗರಸಭೆ ಚುನಾವಣೆಯಲ್ಲಿ ಮತದಾನಕ್ಕೆ ಬರಲಿಲ್ಲ. ಮಾಜಿ ಸಂಸದೆ ಜೊತೆಗೆ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆಯಾಗಿದ್ದುಕೊಂಡು ಮತದಾನದ ಹಕ್ಕು ಚಲಾಯಿಸದ್ದಕ್ಕೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿ ಮತ ಚಲಾವಣೆ ಮಾಡುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.
Comments