ರಾಮನಗರದಲ್ಲಿ ತಾನೇ ತೋಡಿದ ಹಳ್ಳಕ್ಕೆ ಬಿತ್ತ ರಾಜ್ಯ ಬಿಜೆಪಿ..!!

ರಾಮನಗರದಲ್ಲಿ ನಡೆದ ರಾಜಕೀಯ ಬೆಳವಣಿಗೆಯನ್ನು ನೋಡಿದರೆ ರಾಜಕೀಯದಲ್ಲಿ ಯಾರ ಮಾತನ್ನು ಯಾವಾಗ ನಂಬಬೇಕು ಎಂಬುದನ್ನು ಜನಗಳೇ ಅರ್ಥಮಾಡಿಕೊಳ್ಳಬೇಕಾಗಿದೆ.
ಬಿಜೆಪಿ ತೋಡಿದ ಖೆಡ್ಡಾಕ್ಕೆ ತಾನೇ ಬೀಳುವುದು ಎಂದರೆ ಇದೇನಾ..! ಮೊನ್ನೆ ಬಿಜೆಪಿಗೆ ಆನೆ ಬಲ ಬಂದಿದೆ ಎಂದು ಹೇಳಿದ ಯಡ್ಯೂರಪ್ಪ ಇಂದು ವಿಶ್ವಾಸ ದ್ರೋಹ ವಾಗಿದೆ ಎಂದು ಹೇಳುವುದು ಎಷ್ಟು ಸರಿ. ಅವರು ಅಭ್ಯರ್ಥಿಯನ್ನು ಪಕ್ಷದಿಂದ ಚುನಾವಣೆಗೆ ನಿಲ್ಲಿಸುವ ಮೊದಲು ಅವರ ಪಕ್ಷದ ಕಾರ್ಯಕರ್ತರು ಯಾರು ನೆನಪಿಗೆ ಬರಲಿಲ್ಲವ್ವ. ಹೊರಗಿನ ಅಭ್ಯರ್ಥಿಗೆ ಮಣೆ ಹಾಕುವುದು ಎಷ್ಟು ಸರಿ..!
ಬಿಜೆಪಿಯವರು ಎಲ್ಲೆಡೆ ರಾಮನಗರದಲ್ಲಿ ಸರ್ಪ್ರೈಸ್ ಕೊಡ್ತೀವಿ ಎಂದು ಹೇಳುತಿದ್ದ ಬಿಜೆಪಿ ಗೆ ಕಾಂಗ್ರೆಸ್ ನವರೇ ಬಿಜೆಪಿ ಗೆ ರಾಮನಗರದಲ್ಲಿ ಸರ್ಪ್ರೈಸ್ ಕೊಟ್ಟಿದಾರೆ. ಅಂದು ಚಂದ್ರುಶೇಕರ್ ಗೆ ಕಾಂಗ್ರೆಸ್ ನಲ್ಲಿ ಉಸಿರುಕಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತಂತೆ, ತದ ನಂತರ ಅದೇ ಚಂದ್ರಶೇಖರ್ ಬಿಜೆಪಿಗೆ ನಂಬಿಕೆ ದ್ರೋಹಿಯಾದನಂತೆ. ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ನವರು ಹೇಳುತ್ತಾರೆ ಒಂದು ವಾರದ ಮುಂಚೆಯ ಚಂದ್ರಶೇಖರ್ ವಿಶ್ವಾಸ ದ್ರೋಹ ಮಾಡುತ್ತಾನೆ ಎಂದು ತಿಳಿದಿತ್ತಂತೆ ಅದರಿಂದ ಬಿ ಎಸ್ ವೈ ರಾಮನಗರ ಪ್ರಚಾರಕ್ಕೆ ಬರಲಿಲ್ವಂತೆ ಒಟ್ಟಿನಲ್ಲಿ ರಾಜಕೀಯದ ನಾಯಕರು ಯಾವಾಗ ಏನನ್ನು ಮಾತನಾಡುತಾರೋ ಅದನ್ನ ಯಾವಾಗ ನಂಬಬೇಕೋ ಗೊತ್ತಿಲ್ಲ, ಒಟ್ಟಾರೆ ಹೇಳುವುದಾದರೆ ಬಿಜೆಪಿ ಯವರು ತೋಡಿದ ಹಳ್ಳಕ್ಕೆ ಅವರೇ ಬಿದ್ದಂತೆ ಮೆಲ್ನೋಟಕ್ಕೆ ತಿಳಿದು ಬರುತ್ತದೆ.
Comments