ರಾಜಕೀಯ ನಾಯಕರ ಸಂಸ್ಕಾರ ಎಲ್ಲೋಯ್ತು..!!

ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರು ಟೀಕಾಪ್ರಹಾರಗಳನ್ನು ಮಾಡುವುದು ಸಹಜ ಆದರೆ ಇದೀಗ ರಾಜಕೀಯ ನಾಯಕರು ತಮ್ಮ ಪ್ರತಿಷ್ಠೆಗಾಗಿ ಬೇರೊಬ್ಬರ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂಬುದನ್ನು ಜನರು ಸ್ವಲ್ಪ ಯೋಚಿಸಬೇಕಾಗಿದೆ.
ರಾಜಕೀಯದಲ್ಲಿ ಒಂದು ಪಕ್ಷ ಮತ್ತೊಂದು ಪಕ್ಷದ ಮೇಲೆ ಟೀಕಾಪ್ರಹಾರಗಳು ನಾಡೆಯುವುದು, ತಂತ್ರಗಳನ್ನು ಮಾಡುವುದು ಅಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಈಗಿನ ರಾಜಕೀಯದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಪ್ರತಿಷ್ಠೆಗಾಗಿ ಬೇರೆಯವರ ಖಾಸಗಿ ವ್ಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿ ತಮ್ಮ ಕೀಳು ರಾಜಕೀಯವನ್ನು ಪ್ರದರ್ಶಿಸುತ್ತಿದ್ದಾರೆ. ಅದರಲ್ಲೂ ಬಿಜೆಪಿ ಕೆಲವು ನಾಯಕರು ಒಂದು ಕೈ ಮುಂದೆ ಹೋಗಿ ತಮ್ಮ ಸಣ್ಣ ತನವನ್ನು ತೋರಿಸಿದರೆ. ಕುಮಾರ್ ಬಂಗಾರಪ್ಪನವಯು ಮಾಡಿದ ಮೀಟೂ ಬಾಂಬ್ ಗೆ ವ್ಯಾಪಕ ಟೀಕೆ ಕೇಳಿಬಂದಿತು. ಅದಕ್ಕೆ ಸಿ ಎಂ ಕುಮಾರಸ್ವಾಮಿ ಖಡಕ್ ಉತ್ತರವನ್ನು ಕೊಟ್ಟಿದ್ದರು. ಅದಕ್ಕೆ ಒಂದು ಕೈ ಮುಂದೆ ಹೋದ ಜನಾರ್ದನ ರೆಡ್ಡಿ ಮಾಜಿ ಮುಖ್ಯಮಂತ್ರಿಯಾ ಮೇಲೆ ಟೀಕಾಪ್ರಹಾರಗಳನ್ನು ಮಾಡುವ ಬರದಲ್ಲಿ ಸಿದ್ದು ಪುತ್ರ ಶೋಕದಲ್ಲಿ ವಿಕೃತತೆ ಮೆರೆದಿದ್ದರು. ಇದಕ್ಕೆ ಎಲ್ಲೆಡೆ ಟೀಕೆಗಳು ಕೇಳಿಬಂದವು ಸ್ವತಹ ಅವರ ಪಕ್ಷದ ಕೆಲವು ಮುಖಂಡರು ಇದರ ಬಗ್ಗೆ ಟೀಕೆ ಮಾಡಿದರು ಇನ್ನು ಮುಂದೆಯಾದರು ರಾಜಕೀಯ ವ್ಯಕ್ತಿಗಳು ಬೇರೊಬ್ಬರ ಟೀಕಿಸುವ ಬರದಲ್ಲಿ ಕೀಳು ರಾಜಕೀಯ ಎಷ್ಟು ಸರಿ ಎಂಬುದನ್ನು ಒಮ್ಮೆ ಯೋಚಿಸಬೇಕಾಗಿದೆ.
Comments