ಜನಾರ್ದನ ರೆಡ್ಡಿಗೆ ಸವಾಲ್ ಎಸೆದ ಸಿದ್ದರಾಮಯ್ಯ
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಾರ್ಧನಾ ರೆಡ್ಡಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ...
ಜನಾರ್ಧನಾರೆಡ್ಡಿಗೆ ಮನುಷ್ಯತ್ವವಿಲ್ಲ, ಅವನೊಬ್ಬ ಕ್ರಿಮಿನಲ್, ಜನಾರ್ದನ್ ರೆಡ್ಡಿಗೆ ಕಲ್ಚರ್ ಇಲ್ಲ, ಹಾಗಾಗಿ ಅವನ ಮಾತನ್ನು ಯಾರು ಸೀರಿಯಸ್ಸಾಗಿ ತಗೋಬಾರದು ರೆಡ್ಡಿ ಯನ್ನು ಜೈಲಿಗೆ ಕಳಿಸಿದ್ದು ನಾನಲ್ಲ ಜಡ್ಜ್, ನಾನು ಹೇಳಿದ ತಕ್ಷಣ ಅವರನ್ನು ಜೈಲಿಗೆ ಕಳಿಸಲಿಲ್ಲ ಕೇಸ್ ಹಾಕಿ ಸಾಕ್ಷಿಗಳನ್ನು ಪರಿಗಣಿಸಿದ ನಂತರ ಅವರನ್ನ ಜೈಲಿಗೆ ಕಳಿಸಿದ್ದಾರೆ.ರೆಡ್ಡಿ ಚಿನ್ನದ ಕಮೋಡ್'ಗೆ ದುಡ್ಡು ಎಲ್ಲಿಂದ ಬಂತು, ಅವರು ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ರು ಅದಕ್ಕೆಲ್ಲ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ನಾನೆ ಮೈಸೂರಿನಲ್ಲಿ ಇನ್ನು ಒಂದು ಮನೆ ಕಟ್ಟಲು ಸಾಧ್ಯವಾಗಿಲ್ಲ ಹಾಗಾದರೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ನಾನು ರೆಡ್ಡಿ ಜೊತೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
Comments