ಜಪಾನ್ ನಲ್ಲಿ ಪ್ರಧಾನಿ ಮೋದಿಗೆ ಕನ್ನಡದಲ್ಲೇ ಸ್ವಾಗತ...!
ಕಮ್ಯೂನಿಟಿ ಇವೆಂಟ್ ನಲ್ಲಿ ಭಾಗವಹಿಸಲು ಜಪಾನ್ ನ ಟೋಕಿಯೋಗೆ ತೆರಳಿದ್ದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ದೊರೆತಿದ್ದು ಕನ್ನಡದಲ್ಲಿ ಮೋದಿಗೆ ಜೈಕಾರ ಕೂಗಿದ್ದು ವಿಶೇಷವಾಗಿತ್ತು.
ಜಪಾನ್ ಭೇಟಿ ವೇಳೆ ರಾಜಧಾನಿ ಟೋಕಿಯೊದಲ್ಲಿ ಭಾರತೀಯ ಸಮೂಹ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮೋದಿ ಜಪಾನ್‍ನಲ್ಲಿರುವ ಭಾರತೀಯ ಸಮುದಾಯವನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಹೇಗೆ ದೀಪಗಳು ಕತ್ತಲನ್ನು ನಿವಾರಿಸುತ್ತದೆಯೋ ಅದೇ ರೀತಿ ನೀವು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಭಾರತದ ಬೆಳಕನ್ನು ಪಸರಿಸಿ ಭಾರತ ಹೆಮ್ಮೆಪಡುವಂತೆ ಮಾಡಿದ್ದೀರಿ ಎಂದು ಪ್ರಧಾನಿ ಬಣ್ಣಿಸಿದರು.
Comments