ಉಪಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ

ರಾಜ್ಯದಲ್ಲಿ ಉಪಚುನಾವಣೆ ದಿನದಿಂದ ದಿನಕ್ಕೆ ಬಿರುಸುಗೊಂಡಿರುವುದರಿಂದ ಬಿಜೆಪಿ ಉಪಚುನಾವಣಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳನ್ನು ಪಟ್ಟಿ ಅಂತಿಮವಾಗಿದ್ದು ಅವರ ವಿವರ ಹೀಗಿದೆ.
ರಾಮನಗರ ಕ್ಷೇತ್ರದ ಉಸ್ತುವಾರಿಯನ್ನು ಸಿ.ಪಿ.ಯೋಗೇಶ್ವರ್, ಡಿ.ವಿ.ಸದಾನಂದಗೌಡ, ಎ.ನಾರಾಯಣಸ್ವಾಮಿ, ತುಳಸಿ ಮುನಿರಾಜುಗೌಡರವರಿಗೆ ವಹಿಸಿಕೊಡಲಾಗಿದೆ
ಮಂಡ್ಯ ಕ್ಷೇತ್ರದ ಉಸ್ತುವಾರಿಯನ್ನು ಆರ್.ಅಶೋಕ್, ಶಾಸಕ ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ,ಡಿ.ಎಸ್. ವೀರಯ್ಯರವರಿಗೆ ವಹಿಸಿಕೊಡಲಾಗಿದೆ.
ಬಳ್ಳಾರಿ ಕ್ಷೇತ್ರದ ಉಸ್ತುವಾರಿಯನ್ನು ಶಾಸಕರಾದ ಬಿ. ಶ್ರೀರಾಮುಲು, ಸಿ.ಟಿ.ರವಿ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, , ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಎನ್.ರವಿಕುಮಾರ್, ಪ್ರಭು ಚವ್ಹಾಣ್, ಮಾಜಿ ಶಾಸಕ ರಾಮಣ್ಣ ಲಮಾಣಿರವರಿಗೆ ವಹಿಸಿಕೊಡಲಾಗಿದೆ.
ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ಶಾಸಕರಾದ ಕೆ.ಎಸ್.ಈಶ್ವರಪ್ಪ, ಸುನೀಲ್ ಕುಮಾರ್, ಪಿ.ರಾಜೀವ್, ಸಂಸದರಾದ ಜಿ. ಎಂ.ಸಿದ್ದೇಶ್ವರ್, ಶಿವಕುಮಾರ್ ಉದಾಸಿ, ಮಾಜಿ ಸಚಿವ ಡಿ.ಎನ್.ಜೀವರಾಜ್ ರವರಿಗೆ ವಹಿಸಿಕೊಡಲಾಗಿದೆ.
ಜಮಖಂಡಿ ಕ್ಷೇತ್ರದ ಉಸ್ತುವಾರಿಯನ್ನು ಜಗದೀಶ ಶೆಟ್ಟರ್, ಅರವಿಂದ ಲಿಂಬಾವಳಿ,ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಪ್ರಭಾಕರ ಕೋರೆ, ಪಿ.ಸಿ.ಗದ್ದಿಗೌಡರ್ ರವರಿಗೆ ವಹಿಸಿಕೊಡಲಾಗಿದೆ.
Comments