ರಾಮನಗರ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಿಸಿದ ಜೆಡಿಎಸ್..! ಉಪಚುನಾವಣೆಗೆ ಸಿಎಂ ಹೆಚ್’ಡಿಕೆ ಮಾಡಿದ ಮಾಸ್ಟರ್ ಫ್ಲಾನ್..!! ಹಾಗಾದ್ರೆ ಅಭ್ಯರ್ಥಿ ಯಾರ್ ಗೊತ್ತಾ..?

ಈಗಾಗಲೇ ವಿಪಕ್ಷಗಳಲ್ಲಿ ಜೆಡಿಎಸ್ ಕುಟುಂಬ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಕುಟುಂಬ ರಾಜಕಾರಣ ತಪ್ಪಿಸಲು ಜೆಡಿಎಸ್ ಉಪಚುನಾವಣೆಗೆ ಮಾಸ್ಟರ್ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ರಾಮನಗರ ವಿಧಾನಸಭಾ ಉಪಚುನಾವಣೆಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅಖಾಡಕ್ಕಿಳಿಯುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಜೆಡಿಎಸ್ ಪಕ್ಷ ಇದೀಗ ತನ್ನ ವರಸೆಯನ್ನು ಬದಲಿಸಿದೆ. ಒಂದು ವೇಳೆ ರಾಮನಗರದಿಂದ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದ್ರೆ ಕುಟುಂಬ ರಾಜಕಾರಣ ಅಪಾದನೆಗೆ ಗುರಿಯಾಗುವುದು ಗ್ಯಾರಂಟಿ ಎನ್ನುವುದು ಜೆಡಿಎಸ್ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಕುಟುಂಬ ರಾಜಕಾರಣ ಆಪಾದನೆಯಿಂದ ಹೊರಬರಲು ಅನಿತಾ ಬದಲಿಗೆ ಪಿ.ಜಿಆರ್. ಸಿಂಧ್ಯಾ ಅಥವಾ ಸೊರಬ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ನಿಲ್ಲಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್ ಮಾಡಿದೆ ಎಂದು ಹೇಳಲಾಗಿದೆ.
Comments