ಸಚಿವ ಸ್ಥಾನಕಾಂಕ್ಷಿಗಳಿಗೆ ದೇವೇಗೌಡ್ರು ಕೊಟ್ರು ಶಾಕಿಂಗ್ ನ್ಯೂಸ್..!

ಇದೀಗ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಆಕ್ಟೋಬರ್ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗೆ ನೇಮಕವಾಗಲಿದೆ ಎಂದು ಹೇಳಲಾಗುತ್ತಿತ್ತು..
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಲೋಕಸಭೆ ಚುನಾವಣೆವರೆಗೂ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಡಬಾರದೆಂದು ಒತ್ತಡ ಹಾಕಿದ್ದು, ಈ ಬಗ್ಗೆ ನವದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ವೇಣುಗೋಪಾಲ್ ಅವರಿಗೆ ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದು ಹೇಳಿಯೆ ನೀಡಿದ್ದರು. ಈ ನಡುವೆ ಸಂಪುಟ ವಿಸ್ತರಣೆಗೆ ಮುಂದಾದರೆ ಪಕ್ಷದಲ್ಲಿ ಹೊಸ ಸಂಕಟ ಸೃಷ್ಟಿಯಾಗಲಿದ್ದು, ಸದ್ಯದ ಮಟ್ಟಿಗೆ ಈ ಸಾಹಕ್ಕೆ ಕೈ ಹಾಕದೇ ಯಥಾ ಸ್ಥಿತಿಯನ್ನು ಕಾಪಾಡಿಕೊಂಡು ಹೋದರೆ ಉತ್ತಮ ಅಂತ ದೇವೇಗೌಡ್ರು ಹೇಳಿದ್ದಾರೆ ಎನ್ನಲಾಗಿದೆ.
Comments