ಹೆಚ್’ಡಿಕೆ ಪರ ಬ್ಯಾಟಿಂಗ್ ಬೀಸಿದ ಅಂಬರೀಶ್..! ಜೆಡಿಎಸ್ ಪಾಲಾಗ್ತಾರಾ ಮಂಡ್ಯದ ಗಂಡು..!!

ದೋಸ್ತಿ ಸರ್ಕಾರ ರಚನೆಯಾದ ದಿನದಿಮದ ಒಂದಲ್ಲ ಒಂದು ಜಗಳಗಳು, ಒಳಗೊಳಗೆ ಮುಸುಕಿನ ಗುದ್ದಾಟಗಳು ನಡೆಯುತ್ತಲೆ ಇವೆ. ಆದರೆ ಇದರ ನಡುವೆ ಅಂಬರೀಶ್ ಒಂದು ಹೇಳಿಕೆಯನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ಗೆ ಕುಮಾರಸ್ವಾಮಿ ಅನಿವಾರ್ಯ, ಆದರೆ ಕುಮಾರಸ್ವಾಮಿಗೆ ಕಾಂಗ್ರೆಸ್ ಅನಿವಾರ್ಯವಲ್ಲ ಎಂದು ಹೇಳುವ ಮೂಲಕ ದೋಸ್ತಿ ಸರ್ಕಾರದಲ್ಲಿ ಯಾರಿಗೆ ಯಾರು ಅನಿವಾರ್ಯ ಎಂದು ಮಾಜಿ ಸಚಿವ ಅಂಬರೀಶ್ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮಂಡ್ಯದಲ್ಲಿ ಮಾತನಾಡಿದ ಅಂಬರೀಶ್ ಅವರು, ಜೆಡಿಎಸ್ಗೆ ಬೇಕಾದರೆ ಬೇರೆ ಆಯ್ಕೆ ಇದೆ. ಆದರೆ ಕಾಂಗ್ರೆಸ್ಗೆ ಕುಮಾರಸ್ವಾಮಿಯವರೇ ಅನಿವಾರ್ಯ ಎಂದು ಹೇಳಿ ಸ್ವಪಕ್ಷೀಯರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಕುಮಾರಸ್ವಾಮಿಗೆ ಕಾಂಗ್ರೆಸ್ ಅನಿವಾರ್ಯವಲ್ಲ ಎಂದು ಎಚ್ಡಿಕೆ ಪರ ಬ್ಯಾಟಿಂಗ್ ಮಾಡಿದರು. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಅಂಬರೀಶ್ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಜೆಡಿಎಸ್ ಸೇರುತ್ತಾರ ಎಂಬ ಅನುಮಾನಗಳು ಕಾಣಿಸಿಕೊಂಡಿವೆ.
Comments