ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲಿಸಲು ಪ್ರಜ್ವಲ್ ರೇವಣ್ಣ ಮಾಡಿರುವ ಮಾಸ್ಟರ್ ಪ್ಲ್ಯಾನ್ ಏನ್ ಗೊತ್ತಾ...!

2019 ರ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷದವರು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಮೂಲಗಳ ಪ್ರಕಾರ ನೋಡುವುದಾದರೆ ಲೋಕಸಭಾ ಚುನಾವಣೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹಾಗಾಗಿ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿಯಲು ಮಾಸ್ಟರ್ ಫ್ಲಾನ್ ಸಿದ್ದಪಡಿಸಿಕೊಂಡಿದ್ದಾರೆ.ಇದೀಗ ರೇವಣ್ಣ ಬಳಸಿಕೊಂಡಿರುವುದು ಸಾಮಾಜಿಕ ಜಾಲಾತಾಣಗಳನ್ನು.. ಲೋಕೋಪಯೋಗಿ ಸಚಿವ ರೇವಣ್ಣರ ಸರ್ಕಾರಿ ಬಂಗಲೆಯಿಂದಲೇ ಸಾಮಾಜಿಕ ಜಾಲತಾಣ ಮುಖಾಂತರ ಪ್ರಚಾರ ಮಾಡಲು ತಂಡವೊಂದನ್ನು ಕಟ್ಟಿರುವ ಪ್ರಜ್ವಲ್ ರೇವಣ್ಣ, ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಸಿದ್ದರಾಗಿದ್ದಾರೆ. ಹೀಗೆ ಮಾಡಿದರೆ ಕಾರ್ಯಕರ್ತರಿಗೆ ಹತ್ತಿರವಾಗಬಹುದು, ಹಾಗೂ ಸಾಮಾಜಿಕ ಕಾರ್ಯಗಳಲ್ಲೂ ಭಾಗವಹಿಸಬಹುದು ಎಂಬುದು ಅವರ ಉದ್ದೇಶ.
Comments