ಸಮ್ಮಿಶ್ರ ಸರ್ಕಾರದ ವಿರುದ್ದವೇ ತಿರುಗಿ ಬಿದ್ದ ಈ ಸಚಿವ..!

ರಾಜಕೀಯ ಅಂದರೆ ಹಾಗೆ ಏನೋ ಮಾಡಲು ಹೋಗಿ ಇನ್ನೇನೋ ಆಗುತ್ತದೆ.. ಒಮ್ಮೊಮ್ಮೆ ರಾಜಕಾರಣಿಗಳ ಮಧ್ಯೆ ಸುಖಾಸುಮ್ಮನೆ ಜಗಳಗಳು ನಡೆಯುತ್ತಲೇ ಇರುತ್ತವೆ. ಇದೀಗ ದೋಸ್ತಿ ಪಕ್ಷಗಳ ವಿರುದ್ದವೇ ಶಿಕ್ಷಣ ಸಚಿವರಾದ ಎನ್.ಮಹೇಶ್ ವರು ಹರಿಹಾಯ್ದರಿರುವ ಘಟನೆ ನಡೆದಿದೆ ಎಂಬ ಮಾಹಿತಿಗಳು ತಿಳಿದುಬಂದಿದೆ.
ಶಿಕ್ಷಣ ಸಚಿವ ಎನ್. ಮಹೇಶ್ ಅವರು ಇಂದು ನಗರದಲ್ಲಿ ಮಾದ್ಯಮದವರ ಜೊತೆಗೆ ಮಾತನಾಡುತ್ತ ಕಾಂಗ್ರೆಸ್, ಜೆಡಿಎಸ್. ಪಕ್ಷಗಳು ಜಾತಿ ಅಧಾರಿತ ಪಕ್ಷವಾಗಿವೆ. ಈ ಪಕ್ಷಗಳಿಗೆ ಜಾತಿ ಪದ್ದತಿಯನ್ನು ನಾಶ ಮಾಡುವುದುಕ್ಕೆ ಆಗುವುದಿಲ್ಲ, ಈ ಪಕ್ಷಗಳಿಗೆ ಶೋಷಿತರನ್ನು ಉದ್ದಾರ ಮಾಡುವ ಮನಸ್ಸು ಮಾಡುವುದಿಲ್ಲ, ಹೀಗಾಗಿ ಬಿಎಸ್ಪಿ ಪಕ್ಷ ಹುಟ್ಟುಕೊಂಡಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಒಪ್ಪಂದ ಮಾಡಿಕೊಂಡರು ಅದಕ್ಕೂ ಬಿಸ್ಪಿಗೆ ಸಂಬಂಧವಿಲ್ಲ ಎಂದು ಕೂಡ ತಿಳಿಸಿದರು.
Comments