ರೈತರ ಪರ ಮತ್ತೊಮ್ಮೆ ನಿಂತ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
ರೈತರು ಈಗಿನ ಪರಿಸ್ಥಿತಿಯಲ್ಲಿ ಸಾಲ ತೀರಿಸಲಾಗದೆ…ರಾಜ್ಯ ಸರ್ಕಾರ ಯಾವಾಗ ನಮ್ಮನ್ನ ಸಾಲ ಋಣ ಮುಕ್ತರನ್ನಾಗಿಸುತ್ತದೆ ಎಂದು ಯೋಚಿಸುತ್ತಿದ್ದಾರೆ. ಕೃಷಿ ಸಾಲ ಮನ್ನಾ, ಕಬ್ಬಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಗೆ ಹೊರಟಿದ್ದ ಕಿಸಾನ್ ಕ್ರಾಂತಿ ಯಾತ್ರೆಯ ಮೇಲೆ ಪೊಲೀಸರು ನಡೆಸಿದ ದಾಳಿಯನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತೀವ್ರವಾಗಿ ಖಂಡಿಸಿದ್ದಾರೆ.
ಪೊಲೀಸರು ಭಾರತೀಯ ಕಿಸಾನ್ ಯೂನಿಯನ್ ಕರೆ ನೀಡಿದ್ದ ಕ್ರಾಂತಿಯ ಯಾತ್ರೆಯನ್ನು ತಡೆದರು ಎಂಬುದನ್ನು ಕೇಳಿ ನಾನು ದಿಗ್ಭ್ರಾಂತನಾಗಿದ್ದೇನೆ. ಶಾಂತಿಯುತವಾಗಿ ಸಾಗಿದ್ದ ಪ್ರತಿಭಟನಾ ಯಾತ್ರೆಯನ್ನು ಅಹಿಂಸಾವಾದಿಯಾದ ಗಾಂಧಿ ಜಯಂತಿಯ ದಿನದಂದು ತಡೆದು, ದಾಳಿ ನಡೆಸಿರುವುದು ಒಪ್ಪವಂತಹದ್ದಲ್ಲ ಎಂಬುದು ಲಾಲ್ ಬಹುದ್ದೂರ್ ಶಾಸ್ತ್ರೀ ಅವರು ಪ್ರತಿಪಾದಿಸಿದ್ದ ಜೈ ಜವಾನ್ ಜೈ ಕಿಸಾನ್ ತತ್ವದ ಭಾಗ ಎಂಬುದನ್ನು ನಾವು ಮರೆಯಬಾರದು ಎಂದು ದೇವೇಗೌಡರು ಟ್ವೀಟ್ ಕೂಡ ಮಾಡಿದ್ದಾರೆ. ಇದರಲ್ಲೆ ತಿಳಿಯುತ್ತದೆ ರೈತರ ಪರವಾಗಿ ಜೆಡಿಎಸ್ ನಿಂತು ಕಾರ್ಯ ನಿರ್ವಹಿಸುತ್ತಿರುವುದು.
Comments