ಪ್ರಬಲ ಖಾತೆ ನೀಡದಿದ್ದರೆ ಕೈ ಪಕ್ಷಕ್ಕೆ ರಾಜೀನಾಮೆ ಕೊಡ್ತಿನಿ ಎಂದ ಈ ಪ್ರಭಾವಿ ಶಾಸಕ ಯಾರ್ ಗೊತ್ತಾ..?

ರಾಜಕೀಯದಲ್ಲಿ ಇತ್ತಿಚಿನ ದಿನಗಳ ಬೆಳವಣಿಗೆ ನೋಡಿದರೆ ಏನಾಗುತ್ತಿದೆ ಎಂಬ ಗೊಂದಲ ಮೂಡುತ್ತದೆ. ಅಷ್ಟೆ ಅಲ್ಲದೆ ಪಕ್ಷ ಪಕ್ಷಗಳ ನಡುವೆ ಕಿತ್ತಾಟ, ಜಗಳ, ಮನಃಸ್ತಾಪ ಎಲ್ಲವೂ ಕೂಡ ಮನೆ ಮಾಡಿದೆ.. ಹಾಗಾಗಿ ರಾಜಿನಾಮೆ ಕೊಡುವುದು ಕಾಮನ್ ಆಗಿಬಿಟ್ಟಿದೆ.ಇದೀಗ ಮತ್ತೊಬ್ಬ ಕೈ ಶಾಸಕ ರಾಜಿನಾಮೆ ಕೊಡಲು ಮುಂದಾಗಿದ್ದಾರೆ.
ನನಗೆ ಪ್ರಭಾವಿ ಖಾತೆ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ,ಕಾರ್ಮಿಕ ಖಾತೆ ಇಟ್ಟುಕೊಂಡು ನಾನೇನು ಮಾಡಲಿ ಎಂದು ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಕಿಡಿಕಾರಿದ್ದಾರೆ. ಅಧಿಕಾರಿಗಳ ಕಿರಿಕಿರಿ ಜೊತೆ ಖಾತೆ ಇಟ್ಟುಕೊಂಡು ನಾನೇನು ಮಾಡಲಿ. ಕಾರ್ಮಿಕ ಖಾತೆಯಲ್ಲಿ ಕೆಲಸ ಇಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನನಗೆ ಬೇರೆ ಯಾವುದಾದೂ ಪ್ರಭಾವಿ ಖಾತೆ ಕೊಡುವುದಾದರೆ ಕೊಡಲಿ, ಇಲ್ಲದಿದ್ದರೆ ನನ್ನ ದಾರಿ ನನಗೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ..
Comments