ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೂ ಹಾಗೂ ಗರ್ಭಿಣಿಯರಿಗೆ ಗುಡ್ ನ್ಯೂಸ್ ..! ಇನ್ಮುಂದೆ ಸಿಗಲಿದೆ 5000 ಮಾಸಾಶನ

ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ತಂದಿದೆ.ಹಿರಿಯ ನಾಗರಿಕರು ಮತ್ತು ಗರ್ಭಿಣಿ ಮಹಿಳೆಯರಿಗೆ ಪ್ರತಿವರ್ಷ ಒಂದು ಸಾವಿರರೂ.ನಂತೆ ಮಾಸಾಶನ ಹೆಚ್ಚಳ ಮಾಡುತ್ತೇವೆ. ಒಟ್ಟಿನಲ್ಲಿ ನಮ್ಮ ಸರ್ಕಾರದ ಅವಧಿ ಪೂರ್ಣಗೊಳಿಸುವ ವೇಳೆಗೆ 5 ಸಾವಿರ ರೂ. ದೊರೆಯುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇದೀಗ ಇದ್ದ 600 ರೂ. ಮಾಸಾಶನವನ್ನು ಒಂದು ಸಾವಿರಗಳಿಗೆ ಹೆಚ್ಚಿಸಲಾಗಿದೆ. ನವೆಂಬರ್ ಒಂದರಿಂದ ಅದು ಕೂಡ ಜಾರಿಗೆ ಬರುತ್ತದೆ. ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ಪ್ರತಿ ತಿಂಗಳಿಗೆ ಒಂದು ಸಾವಿರ ರೂ. ಸಿಗಲಿದೆ. ಮುಂದಿನ ವರ್ಷ ಅದನ್ನು 2ಸಾವಿರ, 3ನೇ ವರ್ಷ ಅದನ್ನು 3 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡುತ್ತಾ 5 ವರ್ಷ ಪೂರ್ಣಗೊಳ್ಳುವುದರೊಳಗೆ 5 ಸಾವಿರ ರೂ. ದೊರೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು.
Comments