ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮೂಹೂರ್ತ ಫಿಕ್ಸ್..! ಯಾರು ಯಾರಿಗೆ ಯಾವ ಸ್ಥಾನ..?
ದೋಸ್ತಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ದಿನಾಂಕವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಇದೇ ತಿಂಗಳು 10 ಅಥವಾ 12 ಕ್ಕೆ ನಡೆಯಲಿದೆ ಎಂದು ಸಿಎಂ ಕುಮಾಸ್ವಾಮಿ ಅವರು ಸ್ಪಷ್ಟ ಪಡಿಸಿದ್ದಾರೆ. ಇಂದು ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಚಿವ ಸಂಪುಟದ ಎಲ್ಲಾ ತಯಾರಿಗಳು ಕೂಡ ನಡೆಯುತ್ತಿವೆ ಎಂದರು.
ಈ ಸಮಯದಲ್ಲಿ ಸಂಪುಟ ವಿಸ್ತರಣೆ ಕುರಿತು ಎಲ್ಲಾ ರೀತಿಯ ತಯಾರಿಗಳು ಹಾಗೂ ವಿವಿಧ ಹಂತದ ಚರ್ಚೆಗಳು ಕೂಡ ನಡೆಯುತ್ತಿವೆ. ಒಂದೇ ಕಂತಿನಲ್ಲಿ ಬಾಕಿ ಇರುವ ಸಂಪುಟದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಸಂಪುಟದಲ್ಲಿ ಖಾಲಿ ಇರುವ ಒಟ್ಟು ಏಳು ಸ್ಥಾನಗಳನ್ನು ಭರ್ತಿ ಮಾಡಲು ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈಗಾಗಲೇ ಹೈಕಮಾಂಡ್ ನಾಯಕರ ಜತೆ ಕಾಂಗ್ರೆಸ್ ಮುಖಂಡರು ಹಾಗೂ ನಾವು ಕೂಡ ಮಾತುಕತೆ ನಡೆಸಿದ್ದೇವೆ. ಅ.10 ಅಥವಾ 12ರಂದು ಏಳು ಮಂದಿ ಹೊಸದಾಗಿ ಸಂಪುಟ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು. ಖಾಲಿ ಇರೋ 6 ಸ್ಥಾನಗಳ ಜೊತೆ 4 ಸಚಿವರನ್ನ ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸಿ 10 ಸ್ಥಾನ ತುಂಬಲು ಕೈ ನಾಯಕರು ಕಸರತ್ತು ಆರಂಭಿಸಿದ್ದಾರೆ. ಇದೇ ತಿಂಗಳು ಕೊನೆಯ ವಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪರಮೇಶ್ವರ್ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಈ ಸಂಬಂಧ ಚರ್ಚಿಸಲಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಂತ್ರಿ ಸ್ಥಾನ ನೀಡಲು ತೀರ್ಮಾನ ಮಾಡಲಿದ್ದು, ಲೋಕಸಭೆ ಚುನಾವಣೆಗೆ ಆರ್ಥಿಕ ಸಂಪನ್ಮೂಲ ಒದಗಿಸುವ ಶಾಸಕರಿಗೆ ಸಂಪುಟದಲ್ಲಿ ಮಣೆ ಹಾಕುವ ಸಾಧ್ಯತೆ ಹೆಚ್ಚಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳು : ರಾಮಲಿಂಗ ರೆಡ್ಡಿ, ಸಿ.ಎಸ್ ಶಿವಳ್ಳಿ, ಎಂ.ಟಿ.ಬಿ ನಾಗರಾಜ್, ಅಮರೇಗೌಡ ಬೈಯಪುರ್, ತುಕಾರಾಂ, ನಾಗೇಂದ್ರ, ಆನಂದ್ ಸಿಂಗ್, ಎಂ.ಬಿ ಪಾಟೀಲ್, ಬಿ.ಸಿ ಪಾಟೀಲ್, ಡಾ. ಸುಧಾಕರ್, ನಾಗೇಶ್ ಪಕ್ಷೇತರ ಶಾಸಕ, ಶಿವರಾಮ್ ಹೆಬ್ಬಾರ್ ,ಬಿ.ಕೆ ಸಂಗಮೇಶ್ವರ್
Comments