ಬಿಎಸ್’ವೈ ಸಿಎಂ ಆಸೆಗೆ ಎಳ್ಳು ನೀರು : ಆಪರೇಷನ್ ಕಮಲಕ್ಕೆ ಪಕ್ಷದಲ್ಲಿಯೇ ತಿರುಗುಬಾಣ..!

ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷದವರು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿವೆ. ಬಿ ಎಸ್ ಯಡಿಯೂರಪ್ಪ ನಾಲ್ಕನೇ ಬಾರಿ ಸಿಎಂ ಆಗುವುದಕ್ಕೆ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದು ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ದೋಸ್ತಿ ಸರ್ಕಾರದ ಶಾಸಕರನ್ನು ಹೇಗಾದ್ರು ಮಾಡಿ ತಮ್ಮ ಕಡೆಗೆ ಸೆಳೆಯಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಇದೆಲ್ಲದರ ನಡುವೆ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದಕ್ಕೆ ಕೇವಲ ಬಿಎಸ್ವೈ ಅವರ ಬಣ ಮಾತ್ರ ಕೆಲಸ ಮಾಡುತ್ತಿದ್ದು, ಸ್ವ ಪಕ್ಷದಲ್ಲಿ ಲೆಹರ್ ಸಿಂಗ್ ಮತ್ತು ಮಾಜಿ ಶಾಸಕ ಸೊಗಡು ಸಚಿವ ಬಿ ಎಸ್ ಯಡಿಯೂರಪ್ಪ ಅವರ ಆಪರೇಷನ್ ಕಮಲದ ವಿರುದ್ದ ಕಿಡಿಕಾರುತ್ತಿದ್ದಾರೆ ಎನ್ನಲಾಗಿದೆ. ಇಷ್ಟೆ ಅಲ್ಲದೆ ಬಿ ಎಸ್ ಯಡಿಯೂರಪ್ಪನವರು ಒಂಟಿ ಸಲಗವಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದು, ಈಶ್ವರಪ್ಪ, ಆರ್. ಆಶೋಕ್, ಜಗದೀಶ್ ಶೆಟ್ಟರ್, ಸೇರಿದಂತೆ ಯಾರು ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ, ಒಂದು ವೇಳೆ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯಲು ಮುಂದಾದರೇ ಪಕ್ಷಕ್ಕೆ ದೊಡ್ಡಪ್ರಮಾಣದಲ್ಲಿ ಹಾನಿಯಾಲಿದೆ ಎಂದಿದ್ದಾರೆ. ಏನೇ ಆದರೂ ಸ್ವ ಪಕ್ಷದಲ್ಲಿಯೇ ಈ ರೀತಿಯಾಗುವುದು ಸರಿಯಲ್ಲ.
Comments