ಮತ್ತೆ ಶಾಸಕ ಬಿ.ಸಿ ಪಾಟೀಲ್ ಗೆ ಗಾಳ ಹಾಕಿದ ಬಿಜೆಪಿ..!
ಬಿಜೆಪಿ ಹಿರಿಯ ಶಾಸಕರು ಹಿರೇಕೇರೂರು ಶಾಸಕ ಬಿ.ಸಿ ಪಾಟೀಲ್ ಗೆ ಮತ್ತೆ ಗಾಳ ಹಾಕಿದ್ದು, ನಿಮಗೆ ದೋಸ್ತಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿಗೆ ಬನ್ನಿ ಅಂತ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೆ ಸಮಯದಲ್ಲಿ ಬಿಸಿ ಪಾಟೀಲ್ ಗೆ ಕಳೆದ ಬಾರಿ ಬಹುಮತ ಸಾಬೀತಿನ ವೇಳೆ ಕರೆದರೆ ನೀವು ಬರಲಿಲ್ಲ. ಮೈತ್ರಿ ಸರ್ಕಾರದಲ್ಲಿ ನೀವು ಸಚಿವರಾಗೋದಕ್ಕೆ ಸಾಧ್ಯ ಇಲ್ಲ ಎಂಬ ಮಾತುಗಳನ್ನು ಆಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಬಿಜೆಪಿಗೆ ಬರುವಂತೆ ಬಿಜೆಪಿ ನಾಯಕರು ಬಿಸಿ ಪಾಟೀಲ್ ಗೆ ಆಹ್ವಾನ ನೀಡುತ್ತಿದ್ದ ಹಾಗೇ ಡಿಸಿಎಂ ಪರಮೇಶ್ವರ್ ಕೂಡಲೇ ಬಿಸಿ ಪಾಟೀಲ್ ಗೆ ಪೋನ್ ಮಾಡಿ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಇದೇ ವೇಳೆ ಪರಮೇಶ್ವರ್ ಅವರು ಬಿ.ಸಿ ಪಾಟೀಲ್ ರಿಗೆ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಿದ್ದು , ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Comments