ಪಕ್ಷ ತೊರೆದ ಬಿಜೆಪಿ ಯಾ ಹಿರಿಯ ನಾಯಕ ..!!

ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ, ಮನ್ವೇಂದ್ರ ಸಿಂಗ್ ರವರು ಬಾರ್ಮರ್ ನಲ್ಲಿ ಆಯೋಜಿಸಲಾಗಿದ್ದ ಸ್ವಾಭೀಮಾನ್ ರ್ಯಾಲಿ ಸಮಾವೇಶದಲ್ಲಿ ಮಾತನಾಡಿ ಮನ್ವೇಂದ್ರ ಸಿಂಗ್, ಪಕ್ಷ ತೊರೆವ ಘೋಷಣೆ ಮಾಡಿದರೆ.
ಕೇಂದ್ರ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮನ್ವೇಂದ್ರ ಸಿಂಗ್, ಎರಡೂ ಸರ್ಕಾರಗಳು ಜನರಿಗೆ ದ್ರೋಹ ಬಗೆದಿದ್ದು, ಇಂತಹ ಪಕ್ಷದಲ್ಲಿ ಇರುವುದು ಆತ್ಮ ಸ್ವಾಭಿಮಾನವನ್ನು ಮಾರಿಕೊಂಡಂತೆ ಮತ್ತು ಬಿಜೆಪಿ ಸೇರಿದ್ದು ತಮ್ಮ ಜೀವಮಾನದಲ್ಲಿ ಮಾಡಿದ ದೊಡ್ಡ ತಪ್ಪು ಎಂದು ಮನ್ವೇಂದ್ರ ಹೇಳಿದ್ದಾರೆ.
ಇನ್ನು ರಾಜಸ್ಥಾನ ವಿಧಾನಸಭೆ ಚುನಾವಣೆ ಹತ್ತಿರದಲ್ಲಿ ಇರುವ ಕಾರಣ ಮನ್ವೇಂದ್ರ ಸಿಂಗ್ ಬಿಜೆಪಿ ತೊರೆದಿರುವುದು ಪಕ್ಷಕ್ಕೆ ಭಾರೀ ನಷ್ಟವನ್ನುಟಂಟು ಮಾಡಲಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.
Comments