ವಿಧಾನಪರಿಷತ್ ಚುನಾವಣೆ : ತೀವ್ರ ಕುತೂಹಲ ಮೂಡಿಸಿದ್ದ 'ಕೈ' ಅಭ್ಯರ್ಥಿಗಳ ಪಟ್ಟಿ ಫೈನಲ್..!

21 Sep 2018 9:56 AM | Politics
395 Report

ಭಾರೀ ಕುತೂಹಲ ಮೂಡಿಸಿರುವ ಮೂರು ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್ ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ವಿಧಾನಪರಿಷತ್‌ ನಾಮನಿರ್ದೇಶನ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಹೈಕಮಾಂಡ್‌ನಿಂದ ಪ್ರಕಟಣೆ ಮಾತ್ರ ಬಾಕಿಯಿದೆ.

ಮೂಲಗಳ ಪ್ರಕಾರ ವಿಧಾನಪರಿಷತ್‌ ಚುನಾವಣೆಗೆ ಕೋಲಾರದ ನಜೀರ್‌ ಅಹಮದ್‌ ಅಥವಾ ಎಂ.ಎಂ. ಹಿಂಡಸಗೇರಿ ಹಾಗೂ ಜಯನಗರದ ಎಂ.ಸಿ. ವೇಣುಗೋಪಾಲ್‌ ಅಥವಾ ಯು.ಬಿ ವೆಂಕಟೇಶ್‌ ಅವರ ಹೆಸರನ್ನು ರಾಜ್ಯ ನಾಯಕರು ಹೈಕಮಾಂಡ್‌ಗೆ ನೀಡಿದ್ದಾರೆ. ಈ ಹಿಂದೆ ಎಂ.ಎಲ್‌.ಸಿಗಳಾಗಿದ್ದ ಡಾ.ಜಿ. ಪರಮೇಶ್ವರ್. ಕೆ.ಎಸ್. ಈಶ್ವರಪ್ಪ ಹಾಗೂ ವಿ.ಸೋಮಣ್ಣ ಈ ಮೂವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇದರಿಂದ ಇವರ ಸ್ಥಾನಗಳಿಗೆ ಅಕ್ಟೋಬರ್ 3ರಂದು ವಿಧಾನಸಭೆಯಿಂದ ಪರಿಷತ್ತಿಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಇನ್ನು ನಾಮನಿರ್ದೇಶನ ಮಾಡುವ ಎರಡು ಸ್ಥಾನಗಳಿಗೆ ಮುಖ್ಯಮಂತ್ರಿ ಚಂದ್ರು, ಬರಗೂರು ರಾಮಚಂದ್ರಪ್ಪ ಹಾಗೂ ವಿ.ಆರ್‌. ಸುದರ್ಶನ್‌ ಈ ಮೂವರ ಹೆಸರನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ರಾಜ್ಯ ನಾಯಕರು ಈ ಹೆಸರಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದಾರೆ. ಆದರೆ, ಅಂತಿಮ ತೀರ್ಮಾನವನ್ನು ಹೈಕಮಾಂಡ್‌ ತೆಗೆದುಕೊಳ್ಳಬೇಕಿದೆ. ಹೈಕಮಾಂಡ್‌ ಕೆಲ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಲು ಮುಂದಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Edited By

Shruthi G

Reported By

Shruthi G

Comments