ರಾಜಕೀಯ ವಲಯದಲ್ಲಿ ಅಚ್ಚರಿ ತಿರುವು : ಸಚಿವ ಸಂಪುಟ ಸಚಿವರೊಬ್ಬರಿಗೆ ವೇದಿಕೆಯಲ್ಲೇ ಬಿಗ್ ಶಾಕ್ ಕೊಟ್ಟ ಡಿಸಿಎಂ..!
ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ನಡುವೆ ಇದೀಗ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಸಂಪುಟದ ಸಚಿವರೊಬ್ಬರಿಗೆ ವೇದಿಕೆಯಲ್ಲೇ ಬಿಗ್ ಶಾಕ್ ನೀಡಿದ್ದಾರೆ. ಯಾರು ಆ ಸಚಿವರು ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್...
ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಅದೃಷ್ಟ ಚೆನ್ನಾಗಿದ್ದರೆ ಐದು ವರ್ಷಗಳ ಕಾಲ ಮಂತ್ರಿಯಾಗಿರಲಿದ್ದಾರೆ ಎಂದು ಹೇಳಿದ್ದಾರೆ. ಜಿ.ಟಿ. ದೇವೇಗೌಡರು ಹೆಚ್ಚೆಂದರೆ ಇನ್ನು ಒಂದು ಅಥವಾ ಎರಡು ವರ್ಷ ಮಂತ್ರಿಯಾಗಿರಲಿದ್ದಾರೆ. ಹೀಗಾಗಿ ಅವರು ತುಮಕೂರು ವಿಶ್ವವಿದ್ಯಾಲಯದ ಅಭಿವೃದ್ಧಿ ಕಡೆ ಕೊಂಚ ಗಮನ ನೀಡುವಂತೆ ತಿಳಿಸಿದ್ದಾರೆ.
Comments