ವಿದೇಶಕ್ಕೆ ಪರಾರಿಯಾದ 'ಆಪರೇಷನ್ ಕಮಲ'ದ ಕಿಂಗ್ ಪಿನ್..!! ಯಾರ್ ಗೊತ್ತಾ..?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆರೋಪಿಸಿದ ಬೆನ್ನಲ್ಲೇ ನಾಲ್ಕು ಆಪರೇಷನ್ ಕಿಂಗ್‌ಪಿನ್‌ಗಳ ಪೈಕಿ ಇಸ್ಪೀಟ್ ಆಡಿಸುವ ಆಪಾದನೆಗೆ ಗುರಿಯಾಗಿದ್ದ ಗುತ್ತಿಗೆದಾರನಾದ ಉದಯ್ ಕೂಡ ಒಬ್ಬ ಎಂದು ಹೇಳಲಾಗುತ್ತಿದೆ. ಸರ್ಕಾರವನ್ನು ಉರುಳಿಸಲು ಪ್ರಯತ್ನ ಪಡುತ್ತಿರುವವರನ್ನು ಬಗ್ಗು ಬಡಿಯಲು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಪೊಲೀಸರು, ಕಾರ್ಯಾಚರಣೆಗಿಳಿದಿದ್ದಾರೆ.
ಈ ಸಂಬಂಧವಾಗಿ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡ ಬೆನ್ನಲ್ಲೇ ಸರ್ಕಾರ ಉರುಳಿಸುವ ಆಪರೇಷನ್ ಕಮಲದ 'ಕಿಂಗ್‌ಪಿನ್'ಗಳಿಗೆ ಪೊಲೀಸರು ಬಲೆಯನ್ನು ಬೀಸಿದ್ದಾರೆ. ಉದಯ್‌ಗೌಡ ಅಲಿಯಾಸ್ ಕ್ಲಬ್ ಉದಯ್ ಮಂಗಳವಾರ ರಾತ್ರಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.ಉದಯ್ ಹಾಗೂ ಆತನ ಸ್ನೇಹಿತ ನಾಯ್ಡು ಮನೆ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ ಪೊಲೀಸರು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಕಾರ್ಯಾಚರಣೆಯ ಮಾಹಿತಿ ಪಡೆದ ಉದಯ್, ಬಂಧನ ಭೀತಿಯಿಂದ ರಾತ್ರಿ ಶ್ರೀಲಂಕಾಕ್ಕೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.
Comments