ರಾಜ್ಯದ ಜನತೆಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಂಫರ್ ಆಫರ್..!ಏನ್ ಗೊತ್ತಾ..?

ಈಗಾಗಲೇ ರಾಜ್ಯ ಸರ್ಕಾರವು ಸಾಕಷ್ಟು ರಾಜ್ಯದ ಜನತೆಗೆ ಸಾಕಷ್ಟು ರೀತಿಯ ಯೋಜನೆಗಳನ್ನು ನೀಡಿದ್ದಾರೆ. ಶಾಲಾ ಮಕ್ಕಳಿಗೆ, ವಿಶೇಷ ಚೇತನರಿಗೆ, ನಿರುದ್ಯೋಗಿಗಳಿಗೆ, ವಯಸ್ಕರಿಗೆ ಅನುಕೂಲವಾಗುವಂತೆ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೃದ್ಯಾಪ್ಯ ಯೋಜನೆಯ ಮಾಸಾಶನವನ್ನು ಏರಿಕೆ ಮಾಡುವ ಮೂಲಕ ಹಿರಿಯರಿಗೆ ಬಂಪರ್ ಆಪರ್ ನೀಡಿದೆ. ಸಿಎಂ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ನಲ್ಲಿ ಮಂಡಿಸಿದ್ದ ಮಾಸಾಶನ ಏರಿಕೆ ವಿಚಾರವನ್ನು ಅಧಿಕೃತವಾಗಿ ಜಾರಿಗೊಳಿಸಿದ್ದಾರೆ. ಈ ನೂತನ ಮಾಸಾಶನ ಆದೇಶವು ನವೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಸಂಧ್ಯಾ ಸುರಕ್ಷಾ ಯೋಜನೆ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ಯೋಜನೆಯ ಮಾಸಾಶನವನ್ನು ಹೆಚ್ಚು ಮಾಡಿದ್ದು, 600 ರೂ.ಗಳಿಂದ 1 ಸಾವಿರ ರೂ. ಗೆ ಮಾಸಾಶನ ಹೆಚ್ಚಿಸಲಾಗಿದೆ ಎಂದು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.
Comments