ಜಮೀರ್ ಅಹಮದ್ ರಾಜೀನಾಮೆ ಕೊಡಲೇಬೇಕು ಎಂದ ಮುಸ್ಲಿಂ ಬಾಂಧವ..!? ಕಾರಣ ಏನ್ ಗೊತ್ತಾ..? ವಿಡಿಯೋ ವೈರಲ್

ಮೈತ್ರಿ ಸರ್ಕಾರದಲ್ಲಿ ಈಗಾಗಲೇ ಒಳಗೊಳಗೆ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ ಎಂದು ಕೆಲವು ನಾಯಕರು ಹೇಳಿದರೆ ಮತ್ತೆ ಕೆಲವು ನಾಯಕರು ಆಗೇನಿಲ್ಲ ಅಂತಾ ಹೇಳುತ್ತಿದ್ದಾರೆ.. ಆದರೆ ಯಾವುದು ನಿಜವೋ ಯಾವುದು ಸುಳ್ಳು ಎಂಬುದನ್ನು ಮೈತ್ರಿ ಸರ್ಕಾರ ನಡೆಸುತ್ತಿರುವವರೇ ಹೇಳಬೇಕು. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಜಮೀರ್ ಅಹಮದ್ ತೀವ್ರ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.
ಯಾರು ಬಿಜೆಪಿಗೆ ಮತ ಹಾಕುತ್ತಾರೋ ಅವರು ಮುಸ್ಲಿಂರಲ್ಲ, ಬಿಜೆಪಿಯಲ್ಲಿ ಯಾರು ಸ್ಪರ್ಧಿಸುತ್ತಾರೋ ಅವರು ಮುಸ್ಲಿಂರಲ್ಲ ಎಂಬ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಜಮೀರ್ ಅಹಮದ್ ಅವರ ಹೇಳಿಕೆಗೆ ಮುಸ್ಲಿಂ ಬಾಂಧವರೆ ಕೆಂಡಾಮಂಡಲವಾಗಿದ್ದಾರೆ. ಒಂದು ವೇಳೆ ಆ ಹೇಳಿಕೆಯನ್ನು ನೀವು ಹಿಂತೆಗೆದುಕೊಳ್ಳದೆ ಇದ್ದಲ್ಲಿ ನೀವು ರಾಜೀನಾಮೆ ನೀಡಲೇಬೇಕು ಎಂದಿದ್ದಾರೆ.
Comments