ಮೈಸೂರಿನ ಸಂಸದ ಪ್ರತಾಪ್ ಸಿಂಹಗೆ ಘೇರಾವ್..!!

ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರು ನೆನ್ನೆ ನಡೆದ ಸ್ಥಳೀಯ ಚುನಾವಣೆಯ ಸಮಯದಲ್ಲಿ ಮೈಸೂರಿನ ಶ್ರೀ ಕಂಠಯ್ಯ ಶಾಲೆಯ ಮತಗಟ್ಟೆಗೆ ಹೋಗಿದ್ದಾಗ ಸ್ಥಳೀಯರು ಪ್ರತಾಪ್ ಸಿಂಹಗೆ ಘೇರಾವ್ ಹಾಕಿದ್ದಾರೆ.
ಮತದಾರರ ಪಟ್ಟಿಯಲ್ಲಿ ಇಲ್ಲದವರು ಕೂಡ ಮತ ಹಾಕುತ್ತಿದ್ದರೆ ಎಂಬ ಮಾಹಿತಿ ಆಧರಿಸಿ ಮೈಸೂರಿನ ಕೆ ಆರ್ ಪುರದ ವಾರ್ಡ್ ನಂಬರ್ 31 ರ ಮತಗಟ್ಟೆ ಬಿಜೆಪಿ ಅಭ್ಯರ್ಥಿ ಪದ್ಮನಾಭ್ ಜೊತೆ ಪ್ರತಾಪ್ ಸಿಂಹ ಭೇಟಿ ಕೊಟ್ಟಿದ್ದರು. ಮತದಾರರಲ್ಲದವರು ಮತಗಟ್ಟೆಗೆ ಹೋಗಬಾರದೆಂದು ಅಲ್ಲಿಯ ಎಸ್ ಜಿ ಪಿ ಐ ಕಾರ್ಯಕರ್ತರು ಮತ್ತು ಸ್ಥಳೀಯರು ಯಾವುದೇ ಕಾರಣಕ್ಕೂ ವೋಟರ್ id ಮತ್ತು ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಅವರನ್ನ ಒಳಗಡೆ ಬಿಡಬಾರದು ಎಂಬ ಪಟ್ಟನ್ನು ಹಿಡಿಯುತ್ತಾರೆ, ಆ ಸಮಯದಲ್ಲಿ ಸಣ್ಣ ಪುಟ್ಟ ಗಲಾಟೆ ನೂಕು ನುಗ್ಗಲು ಉಂಟಾಗುತ್ತದೆ ಆ ಸಮಯದಲ್ಲಿ ಪ್ರತಾಪ್ ಸಿಂಹ ಅವರು ಸಮಾಜಹಿಸಿ ಕೊಡಲು ಮುಂದಾಗುತ್ತಾರೆ ಆದರೆ ಅಲ್ಲಿನ ಸ್ಥಳೀಯರು ಅದನ್ನು ಒಪ್ಪುವುದಿಲ್ಲ ಆಗ ಪೋಲೀಸರ ಭದ್ರತೆಯೊಂದಿಯೇ ಅವರನ್ನು ಕಳಿಸಿ ಕೊಡಲಾಗುತ್ತೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Comments