'ಜೆಡಿಎಸ್ ದಳಪತಿ'ಯ ಭವಿಷ್ಯ ನುಡಿದ ಕಾಂಗ್ರೆಸ್ ಶಾಸಕ..! ಏನಂತಾ ಗೊತ್ತಾ..?
ವಿಧಾನ ಸಭಾ ಚುನಾವಣೆಯ ಫಲಿತಾಂಶ ಬಂದ ಹಿನ್ಲೆಯಲ್ಲಿ ಮೈತ್ರಿ ಸರ್ಕಾರ ರಚನೆಯಾಗಿತು. ವಿರೋಧ ಪಕ್ಷಗಳು ದೋಸ್ತಿ ಸರ್ಕಾರವು ಇನ್ನೂ ಹೆಚ್ಚು ದಿನ ಇರುವುದಿಲ್ಲ ಎಂದು ಹೇಳುತ್ತಿದ್ದರೆ ಇತ್ತ ಮೈತ್ರಿ ಸರ್ಕಾರವು ಇನ್ನು 5 ವರ್ಷ ಸರ್ಕಾರ ನಮ್ಮದೆ ಎನ್ನುತ್ತಿವೆ.ಇದಕ್ಕೆ ಕನ್ನಡಿ ಹಿಡಿದಂತ ಹೇಳಿಕೆಯೊಂದನ್ನ ಕಾಂಗ್ರೆಸ್ ನ ಶಾಸಕ ಸತೀಶ್ ಜಾರಕಿ ಹೊಳಿ ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರು 5 ವರ್ಷ ಅವಧಿ ಪೂರ್ಣ ಮಾಡಲಿದ್ದಾರೆ. ಹೊಸ ಸಿಎಂ ಆಗೋ ವಿಚಾರ ಮುಗಿದು ಹೋದ ಅಧ್ಯಾಯ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುವ ಸಂದರ್ಭದಲ್ಲಿ ಸಮಸ್ಯೆಗಳು ಬರುವುದ ಸಹಜವಾದದ್ದು.., ಯಾವಾಗ ಬೇಕಾದರೂ ಸಮನ್ವಯ ಸಮತಿ ಸಭೆ ಕರೆಯಲು ಅವಕಾಶವಿದೆ. ಸರ್ಕಾರದ ಅನೇಕ ಆಗುಹೋಗುಗಳನ್ನು ಚರ್ಚಿಸಲು ಸಮನ್ವಯ ಇದೆ. ಎಷ್ಟೇ ಪ್ರಬಲ ಮುಖಂಡರಿದ್ದರೂ ಕೊನೆಗೆ ಪಕ್ಷವೇ ಮುಖ್ಯ. ಎಲ್ಲರೂ ಹೈಕಮಾಂಡ್ ಮಾತು ಕೇಳಬೇಕಾಗುತ್ತದೆ ಎಂದು ಸತೀಶ್ ಜಾರಕಿ ಹೊಳಿ ತಿಳಿಸಿದರು
Comments