ರಾಜೀನಾಮೆ ಕೊಡ್ತಾರಂತೆ ಜಮೀರ್ ಅಹಮದ್..!! ಕಾರಣ ಏನ್ ಗೊತ್ತಾ..?

ಮೈತ್ರಿ ಸರ್ಕಾರದಲ್ಲಿ ಈಗಾಗಲೇ ಒಳಗೊಳಗೆ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ ಎಂದು ಕೆಲವು ನಾಯಕರು ಹೇಳಿದರೆ ಮತ್ತೆ ಕೆಲವು ನಾಯಕರು ಆಗೇನಿಲ್ಲ ಅಂತಾ ಹೇಳುತ್ತಿದ್ದಾರೆ.. ಆದರೆ ಯಾವುದು ನಿಜವೋ ಯಾವುದು ಸುಳ್ಳು ಎಂಬುದನ್ನು ಮೈತ್ರಿ ಸರ್ಕಾರ ನಡೆಸುತ್ತಿರುವವರೇ ಹೇಳಬೇಕು. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಜಮೀರ್ ಅಹಮದ್ ತೀವ್ರ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.
ಜಮೀರ್ ಅಹಮದ್ ಒಂದು ಒಳ್ಳೆ ಕೆಲಸ ಮಾಡಲು ಹೋದ್ರೆ ನೂರಾರು ಅಡೆತಡೆಗಳು ಎದುರಾಗುತ್ತಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ… ಮಾಜಿ ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆಯಾದ ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಜಮೀರ್ ತೀವ್ರ ಅಸಮಾಧಾನಗೊಂಡಿದ್ದಾರೆ. 5 ಕೆಜಿ ಅಕ್ಕಿ ಬದಲು 7 ಕೆಜಿ ಅಕ್ಕಿ ನೀಡುವಂತೆ ಎಷ್ಟೇ ಮನವಿ ಮಾಡಿಕೊಂಡರು ಕೂಡ ಪ್ರಯೋಜನವಾಗುತ್ತಿಲ್ಲ ಎಂದು ಜಮೀರ್ ಅಹಮದ್ ಆಪ್ತರಲ್ಲಿ ಹೇಳಿಕೊಂಡಿದ್ದಾರೆ… ಹೀಗೆ ಮುಂದಿನ ದಿನಗಳಲ್ಲಿ ಅಸಹಕಾರ ಎದುರಾದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಜಮೀರ್ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
Comments