ಕಮಿಷನ್ ಆರೋಪ ಮಾಡಿದ ಬಿ ಎಸ್ ಯಡಿಯೂರಪ್ಪ..!

ಕಲ್ಬುರ್ಗಿಯಲ್ಲಿ ಮಾತನಾಡಿದ ಯಡಿಯೂರಪ್ಪನವರು ಕಷ್ಟ ಪಟ್ಟು ಸಮನ್ವಯ ಸಮಿತಿ ಸಭೆ ಕರೆದಿದ್ದಾರೆ ಏಕೆಂದರೆ ಅವರಿಗೆ ರಾಜ್ಯದ ಅಭಿವೃದ್ಧಿಗಿಂತ ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವುದು ಮುಖ್ಯವಾಗಿದೆ, ರಾಜ್ಯದ ಯಾವೊಬ್ಬ ಸಚಿವರು ಪ್ರವಾಸ ಕೈಗೊಳ್ಳದೇ ಸುಮ್ಮನೆ ಸಮಯ ಹಾಳುಮಾಡುತಿದ್ದರೆ, ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ ಎಂದಿದ್ದಾರೆ.
ಇನ್ನು ರಾಜ್ಯದ ನಾಯಕರು ಹೋದಲ್ಲೆಲ್ಲ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಅದಕ್ಕೆ ಒಪ್ಪಿಗೆಯನ್ನು ಸೂಚಿಸಿಲ್ಲ, ಈ ಕಡೆ ನೀರಾವರಿ ಮತ್ತು ಪಿ ಡಬ್ಲ್ಯೂ ಡಿ ಸಚಿವರು ಕಮಿಷನ್ ಕೇಳುತಿದ್ದಾರೆ. ಒಂದು ವೇಳೆ ಕಮೀಷನ್ ಕೊಟ್ಟಿಲ ಅಂದರೆ ಗುತ್ತಿಗೆ ದಾರರಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ .ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನಿರೀಕ್ಷೆಗೂ ಮೀರಿ ಸಾಧನೆ ಮಾಡಲಿದೆ ಎಂಬ ವಿಶ್ವಾಸವನ್ನು ಕೂಡ ವ್ಯಕ್ತ ಪಡಿಸಿದ್ದಾರೆ..
Comments