ಅಂತೂ ಇಂತೂ ನಗರ ಸ್ಥಳೀಯ ಸಂಸ್ಥೆ ಮುಕ್ತಾಯ: ಸೆ.3 ಕ್ಕೆ ಫಲಿತಾಂಶ ಪ್ರಕಟ
ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ನಡೆದ ಮತದಾನದ ಪ್ರಕ್ರಿಯಿಗೆ ಸಂಜೆ 5 ಗಂಟೆಯಲ್ಲಿ ತೆರೆಬಿದಿದ್ದೆ. ಸಾಕಷ್ಟು ಗೊಂದಲ ಜಗಳ ಕಿತ್ತಾಟಗಳ ನಡುವೆಯೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯೂ ಮುಗಿದಿದೆ.
29 ನಗರಸಭೆಗಳ 2,529 ವಾರ್ಡುಗಳಿಗೆ, 53 ನಗರಸಭೆ, 23 ಪಟ್ಟಣ ಪಂಚಾಯತಿ ಮತ್ತು ಮೂರು ನಗರ ಪಾಲಿಕೆಗಳ 135 ವಾರ್ಡುಗಳಿಗೆ ಮತದಾನವು ನಡೆಯಿತು. ಒಟ್ಟು 8,340 ಅಭ್ಯರ್ಥಿಗಳಿದ್ದು 2,306 ಕಾಂಗ್ರೆಸ್, 2,203 ಭಾರತೀಯ ಜನತಾ ಪಾರ್ಟಿಯಿಂದ ಮತ್ತು 1,397 ಅಭ್ಯರ್ಥಿಗಳು ಜೆಡಿಎಸ್ ನ ಅಖಾಡದಲ್ಲಿದ್ದರು. ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶವು ಸೆ 3ರಂದು ಪ್ರಕಟವಾಗಲಿದೆ.
Comments