ಸಮ್ಮಿಶ್ರ ಸರ್ಕಾರದ ಬಗ್ಗೆ ಬೆಂಗಳೂರಿನ ಜನ ಹೇಳಿದ್ದು ಏನು..??

ಮೈತ್ರಿ ಸರ್ಕಾರವು 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನ ಹೇಳಿದ್ದು ಹೀಗೆ, ಕುಮಾರಸ್ವಾಮಿ ರವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದರೆ, ಅವರಿಗೆ ಇನ್ನು ಕಾಲಾವಕಾಶ ಬೇಕಾಗಿದೆ ಈಗಾಗಲೇ ಸರ್ಕಾರವು ಕೆಲವೊಂದು ಜನಪರ ಕಾರ್ಯಗಳನ್ನು ಜಾರಿಗೆ ತಂದಿದೆ.
ಜನ ಅಪೇಕ್ಷಿಸಿದಷ್ಟು ಕೆಲಸಗಳು ಮುಗಿದ್ದಿಲ್ಲ, ಸಮ್ಮಿಶ್ರ ಸರ್ಕಾರ ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕಳಪೆ ಕಾಮಗಾರಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು, ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕು, ಇನ್ನು ಉತ್ತಮ ಕೆಲಸಗಳನ್ನು ಮಾಡಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತ್ಯಪಡಿಸಿದ್ದಾರೆ. ರಾಜ್ಯದ ಜನತೆಗೆ ಬೇಕಾಗುವ ಸೌಲಭ್ಯಗಳನ್ನು ನೀಡಬೇಕು. ರಾಜ್ಯದ ಏಳಿಗೆಗೆ ಶ್ರಮ ವಹಿಸಬೇಕು ಎಂದರು.
Comments