100 ದಿನ ಪೂರೈಸಿದ ಸಮ್ಮಿಶ್ರ ಸರ್ಕಾರಕ್ಕೆ ಟಾಂಗ್ ಕೊಟ್ಟ ಬಿಜೆಪಿ ..!

ಇಂದಿಗೆ ಸಮ್ಮಿಶ್ರ ಸರ್ಕಾರ ರಚನೆಯಾಗಿ 100 ದಿನಗಳು ಕಳೆದರೂ ಕೂಡ ರಾಜ್ಯದಲ್ಲಿ ಯಾವುದೇ ರೀತಿಯ ಮಹತ್ತರ ಬದಲಾವಣೆಯಾಗಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಅದೇ ಬೆನ್ನಲೆ ಬಿಜೆಪಿ ತನ್ನ ಟ್ವೀಟರ್ ನಲ್ಲಿ 100 ದಿನ ಪೂರೈಸಿದ ಸಮ್ಮಿಶ್ರ ಸರ್ಕಾರದ ಬಗ್ಗೆ ಒಂದು ಟ್ಯಾಗ್ ಲೈನ್ ಕೊಟ್ಟಿದೆ. ಈ ಟ್ಯಾಗ್ ಲೈನ್'ನಲ್ಲಿಯೇ ದೋಸ್ತಿ ಸರ್ಕಾರದ ಜೊತೆಗೆ ಸಿಎಂ ಕುಮಾರಸ್ವಾಮಿಗೂ ಕೂಡ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.
ಬಿಜೆಪಿ ತನ್ನ ಟ್ವೀಟರ್ ನಲ್ಲಿ"ದಿನಗಳು ನೂರು ಹೋದಲೆಲ್ಲಾ ಕಣ್ಣೀರು ಅಭಿವೃದ್ಧಿಗೆ ಎಳ್ಳುನೀರು" ಎಂಬ ಟ್ಯಾಗ್ ಲೈನ್ ಬರೆದುಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಮತ್ತು ಎಚ್ ಡಿ ಕುಮಾರಸ್ವಾಮಿಯವರಿಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಅಪವಿತ್ರ ಮೈತ್ರಿ, ಭಿನ್ನಮತದ ಮೂಲಕ ೧೦೦ ದಿನ ಪೂರೈಸಿದ ಸರಕಾರ ಇನ್ನು ಮುಂದೆಯಾದರೂ ಎಚ್ಚೆತ್ತುಕೊಂಡು ಸ್ಥಗಿತ ಕೊಂಡಿರುವ ಅಭಿವೃದ್ಧಿಯ ಕೆಲಸಗಳಿಗೆ ಚಾಲನೆ ಕೊಡಬೇಕು ಎಂದಿದ್ದಾರೆ, ಇನ್ನಾದರೂ ನಿಮ್ಮ ಸರ್ಕಾರ ಟೆಕ್ ಆಫ್ ಆಗಲಿ ಎಂದು ಬಿಜೆಪಿ ತನ್ನ ಟ್ವೀಟರ್'ನಲ್ಲಿ ಬರೆದು ಕೊಂಡಿದೆ.
Comments