ನಾನೇ ಮುಂದಿನ ಸಿಎಂ ಎಂಬ 'ಸಿದ್ದು' ಮಾತಿಗೆ ಟಾಂಗ್ ಕೊಟ್ಟ ಸಿಎಂ 'ಎಚ್’ಡಿಕೆ'

30 Aug 2018 2:57 PM | Politics
1152 Report

ಇತ್ತಿಚಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಾನೇ ಮುಂದಿನ ಸಿಎಂ ಎಂಬ ಹೇಳಿಕೆ ಕೊಟ್ಟಿದ್ದರು. ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.. ಆ ಮಾತಿಗೆ ಇಂದು ಸಿಎಂ ಕುಮಾರಸ್ವಾಮಿಯವರು ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಆರ್.ವಿ ದೇಶಪಾಂಡೆಯವರು ಕೂಡ ಮುಖ್ಯಮಂತ್ರಿಯಾಗ ಬೇಕು ಅಂತ ಕೆಲವರು ಹೇಳುತ್ತಿದ್ದಾರೆ ಅಂತ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.

ಅವರು ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡುವ ಸಮಯದಲ್ಲಿ ಹಾಸನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ನಾನೇ ಮುಂದಿನ ಮುಖ್ಯಮಂತ್ರಿ ಹೇಳಿಕೆಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿಯವರ ಜೊತೆಗೆ ಮಾತನಾಡಿದ್ದೀರಾ ಅಂತ ಸಿಎಂ ಕೇಳಿದ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದರು. ಆ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಹೆಚ್.ಡಿ ಕೆ ಅವರು, ಅವರ ಮಾತಿಗೆ ಅಷ್ಟೂ ಮಹತ್ವ ನೀಡುವುದು ಬೇಡ, ಮುಖ್ಯಮಂತ್ರಿ ರೇಸ್ ನಲ್ಲಿ ಸಾಕಷ್ಟು ಜನಇದ್ದಾರೆ, ನನ್ನ ಪಕ್ಕದಲ್ಲಿರುವ ಆರ್.ವಿ ದೇಶಪಾಂಡೆಯವರು ಕೂಡ ಮುಖ್ಯಮಂತ್ರಿಯಾಗ ಬಹುದು ಅಲ್ಲ್ವಾ? ಪ್ರಶ್ನೆ ಮಾಡಿ ಈ ಮೂಲಕ ಸಿದ್ದರಾಮಯ್ಯ ಅವರಿಗೆ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.

Edited By

Manjula M

Reported By

Manjula M

Comments