ಸಮ್ಮಿಶ್ರ ಸರ್ಕಾರಕ್ಕೆ ಶತದಿನೋತ್ಸವದ ಸಂಭ್ರಮ- ಸಿಎಂ ಕುಮಾರಸ್ವಾಮಿಯವರ ಶತಕದ ಸಾಧನೆಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..!!

ರಾಜ್ಯ ಮೈತ್ರಿ ಸರ್ಕಾರ ಇಂದಿಗೆ ನೂರು ದಿನವನ್ನು ಪೂರೈಸುತ್ತಿದೆ. ನೂರಾರು ವಾದ-ವಿವಾದಗಳ ನಡುವೆ ಸಮ್ಮಿಶ್ರ ಸರ್ಕಾರ ನೂರು ದಿನ ಪೂರೈಸಿದ್ದು, ಕುಮಾರಣ್ಣನ ಸರ್ಕಾರದ ಪಾಸಿಟಿವ್ ರಿಪೋರ್ಟ್ ಇಲ್ಲಿದೆ ನೋಡಿ. ರಾಜ್ಯದಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರ ಹಿಡಿದ ದೋಸ್ತಿ ಸರ್ಕಾರಕ್ಕೆ ಇಂದಿಗೆ ಶತದಿನೋತ್ಸವದ ಸಂಭ್ರಮ. ದೋಸ್ತಿ ಸರ್ಕಾರದ ಆಯಸ್ಸು ಕಡಿಮೆ ಎಂಬ ವಿಪಕ್ಷದ ಆರೋಪದ ನಡುವೆಯು ಒಂದಷ್ಟು ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ..
ಸಿಎಂ ಕುಮಾರಸ್ವಾಮಿಯ ಶತಕದ ಸಾಧನೆ ಇಲ್ಲಿದೆ ನೋಡಿ.. ವಿಪಕ್ಷಗಳ ಮಾತಿಗೆ ಕಿವಿಗೊಡದೆ ಸಾರ್ವಜನಿಕರ ಸಹಕಾರಕ್ಕೆ ನಿಂತಿರುವ ಕುಮಾರಸ್ವಾಮಿಯವರ ಆಡಳಿತವಧಿಯ ಸಾಧಕಗಳು ಈ ಕೆಳಕಂಡಂತಿವೆ.
- ಸಹಕಾರಿ,ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾ ವಿಚಾರ
- ಲೇವಾದೇವಿ ಸಾಲ ಮನ್ನಾ ಯೋಜನೆ. ಫುಟ್ ಪಾತ್ ವ್ಯಾಪಾರಿಗಳಿಗೆ ನಿತ್ಯ ಸಾವಿರ ಸಾಲ ಕೊಡುವ ಮೊಬೈಲ್ ಬ್ಯಾಂಕ್ ವ್ಯವಸ್ಥೆ ಜಾರಿಗೆ ತರುವ ಚಿಂತನೆ.
- ರೈತರಿಗೆ ಆತ್ಮ ಸ್ಥೈರ್ಯ ತುಂಬಲು ರೈತರ ಜೊತೆ ಗದ್ದೆಗೆ ಇಳಿದು ನಾಟಿ ಮಾಡಿರೋದು ಇವೆಲ್ಲವು ಕೂಡ ಕುಮಾರಣ್ಣ ಶತಕದ ಸಾಧನೆ ಎಂದು ಹೇಳಬಹುದು.
- ಸರ್ಕಾರಿ ಶಾಲೆಯಲ್ಲಿ ಓದುವ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಣೆ
- ಕೊಡಗು ಪ್ರವಾಹಕ್ಕೆ ಉತ್ತಮ ಸ್ಪಂದನೆ
- ವಾರಕ್ಕೊಮ್ಮೆ ಶನಿವಾರದಂದು ಜನತಾ ದರ್ಶನ ಕಾರ್ಯಕ್ರಮ.
- ವಿಧಾನಸೌಧಲ್ಲಿ ದಲ್ಲಾಳಿಗಳಿಗೆ ಬ್ರೇಕ್ ಹಾಕುವ ಹೇಳಿಕೆ
- ಮೆಟ್ರೊ ರೈಲಿಗೆ ಇನ್ಫೊಸಿಸ್ ಬೃಹತ್ ಕೊಡುಗೆ
- ವಿಪಕ್ಷವನ್ನ ಜಂಟಿಯಾಗಿ ಎದುರಿಸುತ್ತಿರುವುದು
ಅಷ್ಟೆ ಅಲ್ಲದೆ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 40 ಸಾವಿರ ಕೋಟಿಗು ಹೆಚ್ಚಿನ ಸಾಲ ಮನ್ನ ಕುಮಾರಸ್ವಾಮಿ ಸರ್ಕಾರದ ಮತ್ತೊಂದು ಸಾಧನೆ. ಸಿಎಂ ಕುಮಾರಸ್ವಾಮಿ ಖಾಸಗಿ ಸಾಲದ ಋಣಮುಕ್ತ ಕಾಯ್ದೆಗೆ ಸುಗ್ರಿವಾಜ್ಞೆಯನ್ನು ಹೊರಡಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ರಾಜ್ಯದ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಮಂಡ್ಯದಲ್ಲಿ ರೈತರ ಗದ್ದೆಗೆ ಇಳಿದು ನಾಟಿ ಕೆಲಸ ಮಾಡುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. ಹೀಗೆ ಹಲವು ಸಾಧನೆಯೊಂದಿಗೆ ಶತದಿನೋತ್ಸವ ಪೂರೈಸುತ್ತಿರುವ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ.
Comments