ಮಾನವೀಯತೆ ಮೆರೆದ ಕುಮಾರಣ್ಣ, ಹೂ ಮಾರುವ ಮಗುವಿಗೆ ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?

29 Aug 2018 4:46 PM | Politics
1724 Report

ರಾಜ್ಯದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರಿಗೆ ಮಾನವಿಯತೆಯ ಮನಸಿದೆ, ಕಷ್ಟಕ್ಕೆ ಹೆಗಲು ಕೊಡುವ ಗುಣವಿದೆ, ಕಷ್ಟ ಅಂದವರಿಗೆ ತನ್ನ ಕೈಲಾದ ಸಹಾಯ ಮಾಡುವ ಮನೋಭಾವವಿದೆ, ಕುಮಾರಸ್ವಾಮಿಯವರ ಮಾನವೀಯತೆಗೆ ಮತ್ತೊಂದು ನಿದರ್ಶನ ನಮ್ಮ ಕಣ್ಣ ಮುಂದೆ ಇದೆ.

ರಸ್ತೆ ಬದಿ ಹೂ ಮಾರುತ್ತಾ ನಿಂತಿದ್ದ ಬಾಲಕಿಯನ್ನು ನೋಡಿ ಕುಮಾರಸ್ವಾಮಿಯವರಿಗೆ ಮನಸ್ಸು ಕರಗಿದೆ. ಆ ಬಾಲಕಿಗೆ ಶಿಕ್ಷಣ ಕೊಡಿಸಲು ಸಿಎಂ ಕುಮಾರಸ್ವಾಮಿಯವರು ಮುಂದಾಗಿದ್ದಾರೆ. ರಸ್ತೆಯಲ್ಲಿ ಹೂವನ್ನು ಮಾರುತ್ತ ನಿಂತಿದ್ದ ಮಗುವಿನ ಹೆಸರು ಶಾಬಾಬ್ತಾಜ್. ಬಾಲಕಿಯ ತಂದೆ-ತಾಯಿಯ ಬಗ್ಗೆ ವಿಚಾರಿಸಿದ ಕುಮಾರಸ್ವಾಮಿ ಅವರು ತಂದೆಯನ್ನು ಬಂದು ತಮ್ಮನು ಕಾಣುವಂತೆ ತಿಳಿಸು ಎಂದು ಹೇಳಿದ್ದಾರೆ. ನಿನ್ನ ವಿದ್ಯಾಭ್ಯಾಕ್ಕೆ ಸಹಾಯಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.

Edited By

Manjula M

Reported By

Manjula M

Comments