ದೇವೇಗೌಡರು ಉರುಳಿಸಿರುವ ದಾಳಕ್ಕೆ ಸಿದ್ದು ಕಕ್ಕಾ ಬಿಕ್ಕಿ..!

29 Aug 2018 1:18 PM | Politics
10053 Report

ರಾಜಕೀಯ ವಲಯದಲ್ಲಿ ಈಗಾಗಲೇ  ಇರುವ ಮೈತ್ರಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಯುತ್ತಿದೆ. ಇದರ ಬೆನ್ನಲೆ ದೇವೆಗೌಡರು ಹೊಸದೊಂದು ಚದುರಂಗದ ಪಗಡೆಯನ್ನೆ ಬಿಟ್ಟಿದ್ದಾರೆ.  ಯಡ್ಡಿಯೂರಪ್ಪ ಹಾಗೂ ಸಿದ್ದುಗೆ ಭಾರೀ ಗುದ್ದು ಕೊಡಲು ಹೊರಟಿರುವ ಗೌಡರು ಹೊಸ ಮುಖ್ಯಮಂತ್ರಿಯನ್ನು ನೇಮಕ ಮಾಡಲು ಹೊರಟಿದ್ದಾರೆ.

ಗೌಡರು ಎಬ್ಬಿಸಿರುವ ರಾಜಕೀಯ ಬಿರುಗಾಳಿಯಲ್ಲಿ ಪರಮೇಶ್ವರ್ ರೇವಣ್ಣಗೆ ಲಕ್ ಖುಲಾಯಿಸಿರುವ ಹಾಗೆ ಇದೆ.  ಇದೀಗ ರಾಜ್ಯ ರಾಜಕೀಯದಲ್ಲಿ ಮಹತ್ತರವಾದ ಬೆಳವಣಿಗೆ ನಡೆಯುತ್ತಿದೆ.ಯಾರ ಊಹೆಗೂ ಸಿಗದ ಟರ್ನಿಂಗ್ ಪಾಯಿಂಟ್ ರಾಜಕೀಯ ವಲಯದಲ್ಲಿ ಸದ್ದಿಲ್ಲದೆ ಸಂಚರಿಸುತ್ತಿದೆ. ಹಾಗಾದ್ರೆ ಅದೇನು ಅಮತ ನೀವೆಲ್ಲಾ ಯೋಚಬನೆ ಮಾಡುತ್ತಿರಬಹುದು. ಸಿಎಂ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿ ಆ ಮುಖ್ಯಮಂತ್ರಿ ಸ್ಥಾನಕ್ಕೆ ಪರಮೇಶ್ವರ್ ಅವರನ್ನು ನೇಮಿಸುತ್ತಾರಂತೆ. ನಂತರ ಉಪಮುಖ್ಯಮಂತ್ರಿ ಸ್ಥಾನಕ್ಕೆ ರೇವಣ್ಣ ಅವರನ್ನು ನೇಮಕ ಮಾಡಲಾಗುವುದು ಎಂಬ ಹೊಸ ಸುದ್ದಿ ಹರಿದಾಡುತ್ತಿದೆ. ಆಗ ಕಾಂಗ್ರೆಸ್ ಕೂಡ ಮೈತ್ರಿ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುವುದಿಲ್ಲ ಎಂದಿದ್ದಾರೆ.

Edited By

Manjula M

Reported By

Manjula M

Comments