‘ಕೈ’ ಕಟ್ಟಿ ಹಾಕಲು ಸಿಎಂ ಕುಮಾರಸ್ವಾಮಿಯ ಭರ್ಜರಿ ಸರ್ಜರಿ..! ಸಿಎಂ ನ ಹೊಸ ಅಸ್ತ್ರ ಪ್ರಯೋಗ..!!
ಸಮ್ಮಿಶ್ರ ಸರ್ಕಾರದಲ್ಲಿ ದಿನಕಳೆದಂತೆ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಪಾಪಟಿ ಹೆಚ್ಚುತ್ತಿದೆ. ಆಗೆ ಸರ್ಕಾರ ಉರುಳುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದರ ಮಧ್ಯೆ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೂಡಿರುವ ಹೊಸ ಅಸ್ತ್ರ ಕಾಂಗ್ರೆಸ್ಸನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ
ಒಂದು ವೇಳೆ ಕಾಂಗ್ರೆಸ್ ನಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿದರೆ, ರಾಜ್ಯದ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿಲ್ಲದಿದ್ದರೂ ಕೂಡ ಸಾಲ ಮನ್ನಾ ಮಾಡುವ ತೀರ್ಮಾನವನ್ನು ಕೈಗೊಂಡಿದ್ದೇನೆ. ಅಷ್ಟೆ ಅಲ್ಲದೆ, ರೈತರು ಹಾಗೂ ಕೃಷಿ ಕಾರ್ಮಿಕರನ್ನು ಖಾಸಗಿ ಸಾಲಗಳಿಂದಲೂ ಮುಕ್ತಗೊಳಿಸುವ ಋಣ ಪರಿಹಾರ ನಿಯಮವನ್ನು ಕೂಡ ಜಾರಿಗೆ ತಂದಿದ್ದೇನೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂದು ಹೇಳುವ ಮೂಲಕ ತಾವು ಜನಾಕ್ರೋಶದಿಂದ ಪಾರಾಗಬಹುದು. ನಂತರ ಅದರ ಪರಿಣಾಮ ಕಾಂಗ್ರೆಸ್ ಮೇಲೆ ಬೀಳುತ್ತದೆ. ಈ ರೀತಿಯ ಆರೋಪ ಕೇಳಿ ಬಂದರೆ ಮತ್ತೆ ಚುನಾವಣೆ ನಡೆದರೆ ಕಾಂಗ್ರೆಸ್ ವಿರುದ್ಧ ಜನ ಸಿಡಿದೇಳುವ ವಾತಾವರಣ ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ಅವರು ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಲು ಸಾಧ್ಯವಿಲ್ಲ ಸಿ ಎಂ ಕುಮಾರಸ್ವಾಮಿಯವರು ಹೇಳಿದ್ದಾರೆ.
Comments