ಬಿಗ್ ಬ್ರೇಕಿಂಗ್ : ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಗೆ ಮೂಹೂರ್ತ ಫಿಕ್ಸ್
ಅಂತೂ ಇಂತೂ ಜೆಡಿಎಸ್ ಮೈತ್ರಿ ಸರ್ಕಾರ ಸಮನ್ವಯ ಸಮಿತಿ ಸಭೆಗೆ ಕೊನೆಗೂ ಮೂಹರ್ತ ಫಿಕ್ಸ್ ಆಗಿದೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆಯನ್ನು ಕುಮಾರಕೃಪದಲ್ಲಿ ಆಗಸ್ಟ್ 31 ರಂದು ಸಂಜೆ 4 ಗಂಟೆಗೆ ಸಭೆ ನಡೆಸುವುದಕ್ಕೆ ಉಭಯ ಪಕ್ಷಗಳ ನಾಯಕರುಗಳು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಸಮಯದಲ್ಲಿ ಸಭೆಯಲ್ಲಿ ಲೋಕಸಭಾ ಚುನಾವಣೆ, ಸಾಲಮನ್ನ ಘೋಷಣೆ, ಮೈತ್ರಿ ಸರ್ಕಾರದಲ್ಲಿರುವ ಅಸಮಧಾನ ಕುರಿತು ಚರ್ಚೆ ನಡೆಯುವ ಸಾಧ್ಯತೆ ಯಿದೆಯಂತೆ. ಇದಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ , ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮಿತಿ ಸದಸ್ಯರಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Comments