ಕೈ' 'ಕಮಲ' ಕ್ಕೆ ಬಿಗ್ ಶಾಕ್ ! 'ತೆರೆ ಹೊತ್ತ' ನಾಯಕ ಕೊಟ್ರು ಮಾಸ್ಟರ್ ಸ್ಟ್ರೋಕ್..! ಏನಿದು ಸಿಎಂ ನ ಹೊಸ ಬ್ರಹ್ಮಾಸ್ತ್ರ..!?

ಸಧ್ಯ ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಸಿಡಿಸಿದ ಋುಣಮುಕ್ತ ಸುಗ್ರೀವಾಜ್ಞೆ ಅಸ್ತ್ರ ಭಾರಿ ಸಂಚಲನವನ್ನು ಮೂಡಿಸಿದೆ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ವಿರೋಧಿಗಳ ಪ್ರಯತ್ನದ ವಿರುದ್ಧ ಹೂಡಿರುವ ಬ್ರಹ್ಮಾಸ್ತ್ರ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರು ಆಗಾಗ ಸರ್ಕಾರದ ಅಸ್ತಿತ್ವ ಬಹಳ ದಿನ ಇರುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ತೆರೆಮರೆಯಲ್ಲಿ ಕಾಂಗ್ರೆಸ್‌ನ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಸಂದೇಶವನ್ನು ಕೂಡ ನೀಡುತ್ತಿದ್ದಾರೆ. ಮತ್ತೊಂದು ಕಡೆ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಸರ್ಕಾರದ ಅಸ್ತಿತ್ವದ ಬಗ್ಗೆ ಅನುಮಾನ ಬರುವಂತಹ ಮಾತುಗಳನ್ನು ಪದೆ ಪದೆ ಹೇಳುವ ಮೂಲಕ ಸಮ್ಮಿಶ್ರ ಸರ್ಕಾರ ಅಲ್ಪಾಯು ಎಂಬ ಸಂದೇಶವನ್ನು ಎಲ್ಲೆಡೆ ಹರಡುತ್ತಿದ್ದಾರೆ. ಬಡವರ ಖಾಸಗಿ ಸಾಲ ಮನ್ನಾ ಮಾಡುವಂತಹ ಪ್ರಯತ್ನವನ್ನು ಈ ಹಿಂದೆ ದೇವರಾಜ ಅರಸು ಅವರು ಕೂಡ ಮಾಡಿದ್ದರು. ಇದೀಗ ನಾನು ಮಾಡಿದ್ದೇನೆ ಎನ್ನುವ ಮೂಲಕ ಕುಮಾರಸ್ವಾಮಿ ಅವರು ನೇರವಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿಯೇ ಟಾಂಗ್ ಕೂಡ ನೀಡಿದ್ದಾರೆ. ಈಗ ಕುಮಾರಸ್ವಾಮಿ ಕೂಡ ಅರಸು ಆಡಳಿತಕ್ಕೆ ತಮ್ಮನ್ನು ಹೋಲಿಕೆ ಮಾಡಿಕೊಂಡಿರುವುದು ನೇರವಾಗಿ ಸಿದ್ದರಾಮಯ್ಯ ಅವರ ಕಾಲೆಳೆಯುವ ತಂತ್ರವೆಂದೇ ರಾಜಕೀಯವಾಗಿ ಪರಿಗಣನೆ ಮಾಡಲಾಗುತ್ತದೆ. ಕುಮಾರಸ್ವಾಮಿ ಋುಣಮುಕ್ತ ಸುಗ್ರೀವಾಜ್ಞೆ ಹೊರಡಿಸುತ್ತಿರುವುದು ರಾಜಕೀಯ ಮಾಸ್ಟರ್‌ಸ್ಟೋಕ್ ಎಂದೇ ಎಲ್ಲರು ಪರಿಗಣಿಸುತ್ತಿದ್ದಾರೆ.
Comments