ಬಿಗ್ ಬ್ರೇಕಿಂಗ್: ಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಇವರೆ..!?
ಕಳೆದ ವಿಧಾನಸಭೆಯಲ್ಲಿ ಮಂಡ್ಯದ ಸಂಸದರಾಗಿದ್ದ ಪುಟ್ಟರಾಜು ಅವರು ಸ್ಪರ್ಧಿಸಿ ಗೆದ್ದಿದ್ದಾರೆ. ಈಗ ಅವರ ರಾಜೀನಾಮೆಯಿಂದ ತೆರವಾದ ಮಂಡ್ಯ ಸಂಸದ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಸ್ವತಹ ಜೆಡಿಎಸ್ ಕಾರ್ಯಕರ್ತರಲ್ಲಿಯೇ ಗೊಂದಲವನ್ನು ಉಂಟುಮಾಡಿದೆ.
ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ 7 ಸ್ಥಾನಗಳನ್ನು ಗಳಿಸಿರು ಜೆಡಿಎಸ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಬಿಟ್ಟುಕೊಡುವುದಿಲ್ಲ. ಹಾಗಾಗಿ ಈ ಕ್ಷೇತ್ರಕ್ಕೆ ಅಭ್ಯರ್ಥಿ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ.ಕಳೆದ ಚುನಾವಣೆಯಲ್ಲಿ ಪರೋಕ್ಷವಾಗಿ ಜೆಡಿಎಸ್ಗೆ ಸಪೋರ್ಟ್ ಮಾಡಿದ ಅಂಬರೀಶ್ ಅವರು ಚುನಾವಣೆ ವೇಳೆಗೆ ಜೆಡಿಎಸ್ ಸೇರಲಿದ್ದು ಅವರೇ ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.ಅಂಬರೀಶ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಆದರೆ ಕುಮಾರಸ್ವಾಮಿ ಮತ್ತು ದೇವೇಗೌಡರು ಅಂಬರೀಶ್ ಪಕ್ಷಕ್ಕೆ ಬಂದರೆ ಸ್ವಾಗತಿಸುವುದಕ್ಕೆ ಸಿದ್ದರಾಗಿದ್ದಾರೆ. ಅವರನ್ನು ಪಕ್ಷಕ್ಕೆ ತರುವ ಕೆಲಸವನ್ನು ಅವರ ಸ್ನೇಹಿತರಾಗಿರುವ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಬೇಕು ಎಂದು ಬಹಿರಂಗವಾಗಿ ಕೇಳಿದರೂ ತಮ್ಮ ಹಿರಿ ಮಗನ ಪುತ್ರ ಪ್ರಜ್ವಲ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ಟಿಕೆಟ್ ನೀಡಿರಲಿಲ್ಲ. ಪ್ರಜ್ವಲ್ಗೆ ಹಾಸನದಿಂದ ಲೋಕಸಭೆಗೆ ಟಿಕೆಟ್ ನೀಡುವುದಾಗಿ ದೇವೇಗೌಡರೇ ಹೇಳಿದ್ದರು.ಜೆಡಿಎಸ್ಗೆ ಅತ್ಯಂತ ಸುರಕ್ಷಿತ ಕ್ಷೇತ್ರವಾಗಿರುವ ಮಂಡ್ಯದಿಂದ ಪ್ರಜ್ವಲ್ರನ್ನೇ ಕಣಕ್ಕಿಳಿಸುತ್ತಾರ ದೇವೇಗೌಡರು ಎನ್ನುವ ಮಾತುಗಳು ಕೇಳಿಬರುತ್ತಿದ್ದು. ಒಂದೊಮ್ಮೆ ಮೊಮ್ಮಗನಿಗಾಗಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟರೆ… ದೇವೇಗೌಡರೇ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದು ಮಾಹಿತಿಯ ಪ್ರಕಾರ ಸಿಎಸ್ ಪುಟ್ಟರಾಜು ಅವರೇ ಮತ್ತೆ ಮಂಡ್ಯದ ಜೆಡಿಎಸ್ ಪಕ್ಷದ ಅಭ್ಯರ್ಥಿ ಆಗಲಿದ್ದಾರ ಎನ್ನುವ ಅನುಮಾನ ಕಾಡುವುದಕ್ಕೂ ಪ್ರಾರಂಭವಾಗಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಬಲ ಖಾತೆ ಸಿಗದ ಕಾರಣ ಅವರು ರಾಷ್ಟ್ರ ರಾಜಕಾರಣಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ
Comments