ವಿಪಕ್ಷಗಳ ವಿರುದ್ದ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಸಮ್ಮಿಶ್ರ ಸರ್ಕಾರ ಸಜ್ಜು…! ಹೇಗೆ ಅಂತೀರಾ…!?

ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಬಂದ ಬಹುಮತ ಪಡೆದ ಬಿಜೆಪಿ ಪಕ್ಷ ಬಹುಮತ ಗಳಿಸಿ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಹಾಗಾಗಿ ಅಂದಿನಿಂದ ಮೈತ್ರಿ ಸರ್ಕಾರವನ್ನು ಉರುಳಿಸುವ ಬಿಜೆಪಿಯ ತಂತ್ರನಡೆಯುತ್ತಲೆ ಇದೆ.
ಸರ್ಕಾರ ಉರುಳಿಸೋ ಬಿಜೆಪಿ ಮರು ಪ್ರಯತ್ನಕ್ಕೆ ದೋಸ್ತಿ ಸರ್ಕಾರ ಮತ್ತೊಂದು ಬೃಹತ್ ಶಾಕ್ ಕೊಟ್ಟಿದೆ. ವಿಪಕ್ಷಗಳ ವಿರುದ್ದ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಸಮ್ಮಿಶ್ರ ಸರ್ಕಾರ ಈಗಾಗಲೇ ಸಜ್ಜಾಗಿದೆ. ಕಳೆದ ಬಾರಿ ವಿಶ್ವಾಸಮತ ಸಾಬೀತಿನ ವೇಳೆ ಕಾಂಗ್ರೆಸ್ ಶಾಸಕರಿಗೆ ಲಂಚ ಆಮಿಷದ ಪ್ರಕರಣವಾಗಿ ಟಾರ್ಗೆಟ್ ಲೀಸ್ಟ್ ನಲ್ಲಿದ್ದಾರೆ ಬಿಎಸ್ ವೈ ಶ್ರೀ ರಾಮುಲು, ಜನಾರ್ಧನ ರೆಡ್ಡಿ. ಒಂದು ವೇಳೆ ಸರ್ಕಾರಕ್ಕೆ ಆಪತ್ತು ತರಲು ಮುಂದಾದರೆ ಬಿಎಸ್ ವೈ, ಶ್ರೀ ರಾಮುಲು, ಜನಾರ್ಧನ ರೆಡ್ಡಿ ಬಂಧಿಸಲು ಫ್ಲಾನ್ ಅನ್ನು ಸಿದ್ದಪಡಿಸಿಕೊಂಡಿದೆ. ಬಿ. ಸಿ ಪಾಟೀಲ್ ಸೇರಿದಂತೆ ಹಲವರಿಗೆ 150 ಕೋಟಿ ರೂಪಾಯಿ ಆಫರ್ ನೀಡಿದ್ದ ಆರೋಪ ಹಾಗೂ ಅದರ ಜೊತೆಗೆ ಬಿಸಿ ಪಾಟೀಲ್ ಜೊತೆ ಮಾತನಾಡಿದ ಆಡಿಯೋ ಕೂಡ ಕಾಂಗ್ರೆಸ್ ರಿಲೀಜ್ ಮಾಡಿತ್ತು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಸಿಬಿಗೆ ದೂರು ನೀಡಿದ್ದಾರೆ,
Comments