ಬಿಜೆಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರಂತೆ ಈ ಅಭ್ಯರ್ಥಿ..!
ಯಾವಾಗಲೂ ಸಮಾಜಸೇವಾ ಕೆಲಸಗಳಿಂದ ತುಂಬಾ ಸುದ್ದಿಯಲ್ಲಿರುವ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಪ್ರಮುಖ ಓಪನರ್ ಎನಿಸಿಕೊಂಡಿದ್ದರು.
ತಮ್ಮ ಹುಟ್ಟೂರಾದಂತಹ ದೆಹಲಿಯಲ್ಲಿ ಮಧ್ಯಾಹ್ನದ ವೇಳೆ ಉಚಿತವಾಗಿ ಬಡವರಿಗೆ ಬಿಸಿಯೂಟ ನೀಡುತ್ತಾ ಬಂದಿರುವ ಗೌತಮ್ ಗಂಭೀರ್ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಸುಕ್ಮಾ ನಕ್ಸಲ್ ದಾಳಿಗೆ ತುತ್ತಾಗಿ ನರಳಿದ 25 ಕುಟುಂಬಗಳಿಗೆ ಸಹ ಗೌತಮ್ ಗಂಭೀರ್ ನೆರವಾಗಿದ್ದರು . ಇದೀಗ ಗೌತಮ್ ಗಂಭೀರ್ ಅವರು ರಾಜಕೀಯ ವಲಯಕ್ಕೆ ಕಾಲಿಡುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ದಿಲ್ಲಿಯಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯೂ ಜೋರಾಗಿ ಹಬ್ಬಿದೆ. ಅಂದುಕೊಂಡಂತೆ ಬಿಜೆಪಿಯ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯ ಅಖಾಡಕ್ಕಿಳಿದರೆ ಬಿಜೆಪಿಗೆ ಮತ್ತಷ್ಟು ಬೆಂಬಲ ಸಿಕ್ಕಿದಂತಾಗುತ್ತದೆ.
Comments